ಆಗಸ್ಟ್ ೨೨ ರಂದು ಬ್ಲಾಗಿಗರ ಸಂತೋಷ ಕೂಟವಂತೆ.......!!! ಇದೆ ಸಂತೋಷದಲ್ಲಿ ಉತ್ಸಾಹಿಯಾಗಿ ಕಾಯುತ್ತಿದ್ದೇನೆ ಆ ದಿನ ಬರುವುದೆಂತೋ.....?
ಸ್ನೇಹಿತರೆ ಈ ಸಂತೋಷ ಸಮಾರಂಭದಲ್ಲಿ ಯಾರ್ಯಾರು ಭೇಟಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇದೆ ಖುಷಿಯಲ್ಲಿ, ನನ್ನ ಹುಚ್ಚು ಮನಸ್ಸಿನ ಒಂದು ಪುಟ್ಟ ಕವನ.....!?!
ಬ್ಲಾಗಿಗರ ಕೂಟ
ನಲಿವಿನ ನೋಟ
ಹರಟೆಯ ತೋಟ
ಪರದೆಯ ಆಟ
ಮುಗಿಸುವ ಮಾಟ
ಕರೆಸಿದೆ ಕೂಟ
ಬೆರೆಯುವ ಆಟ
ಕಲೆಸಿದೆ ಪಾಠ
ಒಲವಿನ ಊಟ
ಸಮಯದ ಓಟ
ಆಗಲಿ ದಿಟ
ಸೇರುವರೆಲ್ಲರು ಪಟ, ಪಟ......!!!!!