Sunday, June 21, 2009

ಹೆಸರಿಗೂ ಬಂತು ಹಿಂಜರಿತ.....! (ರಿಸೆಶನ್)ಇದೆ ತಿಂಗಳ 17 ನೆ ತಾರೀಖಿನಂದು ಕೊಲ್ಸಪಾರ್ಕ್ ಹತ್ತಿರದಲ್ಲಿರುವ 'ಸೆಂಟ್ ಜಾನ್ ಕಮ್ಯುನಿಟಿ' ಹಾಲ್ ನಲ್ಲಿ ಒಂದು ಮದುವೇ ನಡೆಯಿತು. ಇದೇನಿದು ಬೆಂಗಳೂರಿನಂತಾ ಮಹಾ ನಗರದಲ್ಲಿ ದಿನಕ್ಕೆ ಹತ್ತಾರು ಮದುವೆಗಳು ನಡೆಯುತ್ತವೆ ಇದರಲ್ಲಿ ವಿಶೇಷವೇನು ಅಂತೀರಾ? ಸ್ವಲ್ಪ ಇರಿ, ಅಲ್ಲೇ ಇರೋದು ವಿಷಯ. ಅದನ್ನು ವಿವರಿಸುತ್ತೀನಿ, ಮುಂದೆ ಓದಿ!
ಆ ದಿನ ಬುಧವಾರ ರಾತ್ರಿ ನಾನು ನಮ್ಮವರು ಮನೆಗೆ ಹಿಂದಿರುಗುವಾಗ, ಆ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದೆವು. ಹಿಂಬದಿಯ ಸೀಟ್ ನಲ್ಲಿ, ಒಂದೇ ಸೈಡ್ ನಲ್ಲಿ ಕುಳಿತಿದ್ದರಿಂದ (ಹಿಂದೆ ಕುಳಿತುಕೊಳ್ಳುವಾಗ ಜಾಸ್ತಿ ಹೀಗೆ ಕೂರುವುದು) ನನಗೆ ಆ ಹೆಸರುಗಳು ಸ್ಪಷ್ಟವಾಗಿ ಕಂಡವು! ಅಂದರೆ ಹೊರಗೆ ಆರ್ಚ್ (ಕಮಾನು) ನಲ್ಲಿ ಬರೆದಿರುತ್ತಾರಲ್ಲ ಆ ಬೋರ್ಡ್ ನಲ್ಲಿ ಓದಿದ್ದು. ಅದು ಹೂವಿನ ಕಮಾನಾಗಿರಲಿಲ್ಲ ಬದಲಿಗೆ ಬೆಂಡ್ ನಲ್ಲಿ (ಥರ್ಮೊಕೋಲ್) ಬರೆದಿದ್ದಂತಾ ಅಕ್ಷರಗಳವು!! (ಕ್ರೈಸ್ತರಲ್ಲವೇ ಅದಕ್ಕೆ)


ಅದನ್ನು ಓದಿ ನನಗೆ ತುಂಬಾ ಆಶ್ಚರ್ಯವಾಯಿತು, ಹೀಗೂ ಉಂಟೆ ಎಂದು!!!
ನಾನು ಈ ವಿಚಿತ್ರವನ್ನು ನನ್ನ ಬ್ಲಾಗ್ ನಲ್ಲಿ ಫೋಟೋ ಸಮೇತ ಹಾಕೋಣ ಎಂದು, ಮಾರನೆ ದಿನ ಬೆಳಗ್ಗೆನೇ ಕ್ಯಾಮೆರಾ ಜೊತೆ ಆ ಕಮ್ಯುನಿಟಿ ಹಾಲ್ ಹತ್ತಿರ ಹೋದೆ. ಅಲ್ಲಿ ಹೋಗಿ ನೋಡಿದರೆ ಆ ಆರ್ಚ್ ಅನ್ನು ತೆಗೆದುಬಿಟ್ಟಿದ್ದರು. ಅಲ್ಲಿ ಏನು ನಡೆದೇ ಇಲ್ಲವೇನೋ ಎನ್ನುವಂತೆ ಎಲ್ಲ ಸ್ವಚ್ಛ ಮಾಡಿಬಿಟ್ಟಿದ್ದರು! ನಾನು ನಿರಾಶೆಯಿಂದ ಹಿಂದಿರುಗಿ ಬಂದೆ. ಈಗ ಫೋಟೋ ಇಲ್ಲದೆ ಬರಿ ಲೇಖನ ಅಷ್ಟೇ ಬರೆದಿದ್ದೀನಿ.


ಇಷ್ಟೆಲ್ಲಾ ಪುರಾಣ ಹೇಳಿ ಇನ್ನೂ ಹೆಸರುಗಳನ್ನೇ ಹೇಳದೆ ಸತಾಯಿಸುತ್ತಿದ್ದೀನಿ ಅಂದುಕೊಳ್ಳುತ್ತಿದ್ದೀರಾ? ಹೇಳ್ತೀನಿ ಹೇಳ್ತೀನಿ! ಅದೇನೆಂದರೆ M WEDS S ಅಷ್ಟೇ !!! ಹೀಗಿದ್ದರೆ ಇದರಲ್ಲಿ ವಧುವಿನ ಹೆಸರ್ಯಾವುದು, ವರನ ಹೆಸರು ಯಾವುದು ಎಂದು ತಿಳಿಯುವುದಾದರೂ ಹೇಗೆ? ಇಲ್ಲಿ ಬಹುಶಃ S ಬದಲು F ಇದ್ದಿದ್ದರೆ, MALE WEDS FEMALE ಅಂತ ಅಂದುಕೊಳಬಹುದಾಗಿತ್ತು ಅಲ್ಲವಾ? !6 comments:

ರಾಜೀವ said...

ಈ ಚಂದಕ್ಕೆ ಆರ್ಚ್ ಯಾಕ್ ಬೇಕಿತ್ತೋ ಗೊತ್ತಿಲ್ಲ.
ದಿನಾಗ್ಲು ಇದೇ ದಾರಿಯಲ್ಲೇ ಕಚೇರಿಗೆ ಹೂಗಿತ್ತೇನೆ. ಆದರೆ ಇದನ್ನು ಗಮನಿಸರಿರಲಿಲ್ಲ.

ಮನಸು said...

hahaha sakatagide haha

Prabhuraj Moogi said...

ಸೂಪರ್... ಇನ್ನೂ ಸ್ವಲ್ಪ ರೆಸೆಶನ ಜಾಸ್ತಿ ಆದಮೇಲೆ... MWS ಅಂತಾನೂ ಬರೆಸಿದರೂ ಬರೆಸಬಹುದು :)

SSK said...

ರಾಜೀವ ಅವರೇ,
ನೀವು ಹೇಳಿದ್ದು ನಿಜ, ಅದೇ ನನಗೂ ಅರ್ಥವಾಗಲಿಲ್ಲ!
ಪ್ರತಿಕ್ರಿಯೆಗೆ ಧನ್ಯವಾದಗಳು, ಹೀಗೆ ಭೇಟಿ ನೀಡುತ್ತಿರಿ.

ಮನಸು ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಸಾಗಲಿ ನಮ್ಮೀ ಬ್ಲಾಗ್ ಪಯಣ!

ಪ್ರಭು ಅವರೇ,
ಸಧ್ಯ ಆ ರೀತಿಯಲ್ಲಿ ಏನೂ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!.
ಯಾಕೆಂದರೆ ಮದುವೇ ಎನ್ನುವುದು ಜೀವನದಲ್ಲಿ ಒಮ್ಮೆ ನಡೆಯುವಂತಾ ಸುಗ್ಗಿ, ಅದಕ್ಕೆ.!!
ನಿಮ್ಮ ಭೇಟಿ ಹೀಗೆ ನಿರಂತರವಾಗಿರಲಿ.

roopa said...

:-) Iga maduve annuvudu sa0pradaaya vaagi uLidilla .. adaralliyo svaartha noDuvavaru iruttaare. lEKana hosaviShayada bagge beLaku cellitu.

SSK said...

Roopa,
Thanks for the complements. Keep comming!