Friday, September 4, 2009

ಪುನರಾಗಮನ

ಹಲೋ ಸ್ನೇಹಿತರೇ, ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಮತ್ತು ನಮ್ಮ ಬ್ಲಾಗ್ ಲೋಕಕ್ಕೆ ಹಿಂದಿರುಗಿದ್ದೇನೆ!!! ಇಷ್ಟು ದಿನ ಎಲ್ಲಿ ಕಳೆದು ಹೋಗಿದ್ದೆ ಎಂದು ಕೇಳುತ್ತಿರುವಿರಾ? ಹೀಗೆ ಹಲವಾರು ವಿಧಗಳಲ್ಲಿ ವ್ಯಸ್ತವಾಗಿ ಹೋಗಿದ್ದೆ ಅದಕ್ಕೆ ಇಷ್ಟು ದಿನ ಯಾವುದೇ ಲೇಖನಗಳನ್ನು ಬರೆಯಲಾಗಿರಲಿಲ್ಲ. ಅದಕ್ಕಾಗಿ ವಿಷಾದವಿದೆ. ನಿಮ್ಮೆಲ್ಲರನ್ನು ಮತ್ತು ನಿಮ್ಮ ಲೇಖನಗಳನ್ನು ಮಿಸ್ ಮಾಡಿಕೊಂಡೆ, ಆದರೆ ಸಮಯ ಸಿಕ್ಕಾಗ ಪ್ರತಿಯೊಂದು ಲೇಖನವನ್ನು ತಪ್ಪದೆ ಓದುತ್ತೇನೆ! (ನೀವು ಯಾರೂ ನನ್ನ ಮರೆತಿಲ್ಲ ತಾನೆ?)

ಸ್ನೇಹಿತರೇ, ನಾವು ಎಲ್ಲಿದ್ದರೂ, ಹೇಗಿದ್ದರೂ ಜೀವನ ತನ್ನ ಪಾಡಿಗೆ ತಾನು ಮುನ್ನಡೆಯುತ್ತಿರುತ್ತದೆ! ಈ ಸತ್ಯ ಎಲ್ಲರಿಗೂ ತಿಳಿದಿರುವಂತಹುದು. ಈ ಜೀವನ ಜಂಜಾಟದಲ್ಲಿ, ಪ್ರತಿಯೊಬ್ಬ ಮನುಷ್ಯನೂ ಎಲ್ಲಾ ತರಹದ ಅನುಭೂತಿಯನ್ನು ಅನುಭವಿಸಬೇಕಾಗುತ್ತದೆ. ನೋವು, ನಲಿವು, ಸುಖ, ದುಃಖ, ಸೋಲು, ಗೆಲುವು, ಸಂತೋಷ, ವ್ಯಥೆ.... ಹೀಗೆ ಇನ್ನೂ ಮುಂತಾದುವು. ಇವೆಲ್ಲಾ ಎಲ್ಲರ ಬದುಕಿನಲ್ಲೂ ಆಗಾಗ ಬಂದು ಹೋಗುವಂತಾ, ಅನುಭವಗಳು.


ಇಷ್ಟು ದಿನಗಳ ನನ್ನ ಗೈರು ಹಾಜರಿಯಲ್ಲಿ ನಾನು ಇವೆಲ್ಲವನ್ನೂ ಅನುಭವಿಸಿದ್ದೇನೆ. ಅಂದರೆ ಇವೆಲ್ಲ ನಮ್ಮ ಜೀವನದ ಒಂದು ಭಾಗ ನಿಜ, ಆದರೆ ಇವೆಲ್ಲವನ್ನೂ, ಒಟ್ಟೊಟ್ಟಿಗೆ ಅಥವಾ ಒಂದರ ನಂತರ ಮತ್ತೊಂದು ಎನ್ನುವಂತೆ ಬೆಂಬಿಡದ ಭೂತವನ್ನು ಸಂಭಾಳಿಸಿದಂತೆ ಈ ಎಲ್ಲಾ ಸಂಧರ್ಭಗಳನ್ನೂ ಒಂದು ಸೀಸನ್ ಎಂಬಂತೆ ಒಮ್ಮೆಲೇ ಎಲ್ಲ ತರಹದ ಅನುಭೂತಿಯನ್ನು ಪಡೆದುಕೊಂಡೆ.

ಸಮಾರಂಭ, ಪ್ರವಾಸ, ಕೆಲಸ, ಓಡಾಟ, ಆತ್ಮೀಯರೊಂದಿಗಿನ ಒಡನಾಟ, ಇವೆಲ್ಲವುಗಳ ಜೊತೆ ಜೊತೆಯಲ್ಲೇ, ಇತ್ತೀಚಿಗೆ ನನ್ನ ಆತ್ಮೀಯ ಗೆಳತಿಯೊಬ್ಬಳ ಅಗಲಿಕೆಯ ನೋವು, ದುಃಖ ಇವೆ ಮುಂತಾದುವು. ಈ ಎಲ್ಲ ನೆನಪುಗಳನ್ನು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, ಜೊತೆಗೆ ಕೆಲವು ಅಪೂರ್ಣ ಲೇಖನಗಳನ್ನು ಪೂರ್ತಿಗೊಳಿಸಬೇಕಿದೆ.

12 comments:

ಜಲನಯನ said...

ಎಸ್ಸೆಸ್ಕೆ ಹೋಗಿದ್ದು ಸಾಕೆ? ತೀರಿತೆ ಪ್ರವಾಸದ ಬಯಕೆ? ನಿಮ್ಮ ಗೂಡಿಗೆ ಬಂದು..ಯಾರೂ ಇಲ್ಲದ್ದು ಕಂಡು ನಿರಾಶರಾಗಿ ಹೋದವರಲ್ಲಿ ನಾನೂ ಒಬ್ಬ. ನನ್ನ ಬ್ಲಾಗ್ ಗೆ ನಿಮ್ಮ ಪ್ರತಿಕ್ರಿಯೆ ಬಂದಾಗ ನಿಮ್ಮ ಗೂಡಿಗೆ ಬಂದೆ..ನಿಮ್ಮ ಈ ಪೋಸ್ಟ್ ನೋಡಿ..ಈ ಪ್ರತಿಕ್ರಿಯೆ...ಹಾಂ..ನನ್ನದೇ ಮೊದಲ ಅನಿಸಿಕೆ ಅನ್ನಿಸುತ್ತೆ...Thanks...ಈಗ ನಿಮ್ಮ ಎಲ್ಲಾ Back log ಅನ್ನೂ ಮುಗಿಸಿಬಿಡಿ...ಫಟಾಫಟ್...

SSK said...

ಜಲನಯನ ಅವರೇ,
ಎಷ್ಟು ಅಮೂಲ್ಯವಾದ ಕಾಳಜಿ ನಿಮ್ಮದು, ನಿಮ್ಮ ಪ್ರತಿಕ್ರಿಯೆ ಓದಿ ನನಗೆ ಮನ ತುಂಬಿ ಬಂದಿತು. ಧನ್ಯವಾದಗಳು ನಿಮಗೆ!
ನಿಮಗೆಲ್ಲ ನಿರಾಸೆ ಮೂಡಿಸಿದ್ದಕ್ಕೆ ಕ್ಷಮೆಯಿರಲಿ. ನಿಮ್ಮ ಅಭಿಮಾನ ಹಾರೈಕೆಗಳೇ ನನಗೆ ಜೀವ ಚೈತನ್ಯ. ಇದೆ ರೀತಿ ಎಂದಿಗೂ ನಿಮ್ಮ ಈ ಗೆಳತಿಯನ್ನು ಹರಸುತ್ತಿರಿ.
ಮತ್ತೊಮ್ಮೆ ಧನ್ಯವಾದಗಳೊಂದಿಗೆ
SSK.

ಮನಸು said...

ಎಸ್ ಎಸ್ ಕೆ ಅವರೇ ನೀವು ಮರಳಿ ಬ್ಲಾಗ್ ಲೋಕಕ್ಕೆ ಬಂದಿರುವುದು ಸಂತಸದ ವಿಷಯ.. ಈಗ ಎಲ್ಲಾ ಕೆಲಸ ಮುಗಿಸಿ ಬಂದಿರುವಿರಿ ನಿಮಗೆ ಸ್ವಾಗತ,

ಲೇಖನಗಳು ಮಿಂಚಲಿ

shivu.k said...

SSK ಮೇಡಮ್,

ನೀವು ಮತ್ತೆ ಬ್ಲಾಗ್ ಲೋಕಕ್ಕೆ ವಾಪಸಾದುದ್ದು ಖುಷಿ. ಪ್ರತಿದಿನ ಸಿಗುತ್ತಿದ್ದವರು ಇದ್ದಕ್ಕಿದಂತೆ ಮಾಯವಾದರೆ ಏನೊ ಒಂಥರ ಅತಂಕ.. ನೀವು ಮಾಯವಾಗಿದ್ದರ ಅನುಭವವೆಲ್ಲವನ್ನು ಬರೆಯುತ್ತಿರೆಂದುಕೊಳ್ಳುತ್ತೇನೆ.. ಅಪೂರ್ಣ ಲೇಖನಗಳನ್ನು ಬೇಗ ಮುಗಿಸಿ...ಬ್ಲಾಗಿಗೆ ತಳ್ಳಿ...

ಧನ್ಯವಾದಗಳು.

ರಾಜೀವ said...

ಎಸ್.ಎಸ್.ಕೆ ಅವರೆ,
ಆತ್ಮೀಯರ ಅಗಲಿಕೆಯ ನೋವು ಮರೆಯುವುದು ಸುಲಭವಲ್ಲ. ಕಷ್ಟಗಳನ್ನು ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ದೇವರು ನಿಮಗೆ ಶಕ್ತಿಯನ್ನು ಕೊಡಲಿ.

ನಿಮ್ಮ ತುಂಟತನದ ಪ್ರತಿಕ್ರಿಯೆಗಳನ್ನು ಕೇಳಿ ಬಹಳ ದಿನವಾಯಿತು. ನಿಮ್ಮಿಂದ ಇನ್ನಷ್ಟು ಲೇಖನಗಳು ಬರಲಿ.

SSK said...

ಮನಸು ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮತ್ತು ನಿಮ್ಮ ಪ್ರೀತಿಗೆ ನಾ ಚಿರಋಣಿ!!

SSK said...

ಶಿವೂ ಅವರೇ,
ಮೊದಲಿಗೆ ನಿಮಗೆಲ್ಲ ಆತಂಕ ಮೂಡಿಸಿದ್ದಕ್ಕೆ ಕ್ಷಮೆಯಿರಲಿ.
ನಿಮ್ಮೆಲ್ಲರ ಪ್ರೀತಿ, ಕಾಳಜಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿ!!
ನನ್ನ ಭಾವನೆ, ಅನಿಸಿಕೆ ಮತ್ತು ಅನುಭವಗಳನ್ನು ತಪ್ಪದೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ತಮ್ಮ ಹಾಸ್ಯ ಲೇಖನದಿಂದ ನಮ್ಮೆಲ್ಲರನ್ನು ನಗಿಸುತ್ತಿದ್ದ "ಶಿವಪ್ರಕಾಶ್ " ಅವರೂ ನನ್ನಂತೆ ಮಾಯವಾಗಿದ್ದಾರೆ!!!
ಅವರ ನೆನೆಪು ನನ್ನನ್ನು ಕಾಡುತ್ತಿದೆ, ಅವರೂ ಸಹ ಬೇಗ ಮರಳಿ ಬರಲಿ ಎಂದು ಆಶಿಸುತ್ತೇನೆ.
ಧನ್ಯವಾದಗಳು.

SSK said...

ರಾಜೀವ ಅವರೇ,
ನಿಮ್ಮ ಮಾತು ಸತ್ಯ, ನೋವನ್ನು ಮರೆಯುವುದು ಅಷ್ಟು ಸುಲಭವಲ್ಲ ನಿಜ ಆದರೆ ಕಾಲವೇ ಎಲ್ಲಕ್ಕೂ ಉತ್ತರ ಅಲ್ಲವೇ?
ನಿಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆಯ ಕೊನೆಯ ಸಾಲನ್ನು ಓದಿ, ನಾಚಿಕೆಯಿಂದ ನನ್ನ ಮುಖ ಕೆಂಪಾಯಿತು!!
ಮತ್ತೊಮ್ಮೆ ಮೆನಿ ಮೆನಿ ಥ್ಯಾಂಕ್ಸ್!!!

Unknown said...

ಎಸ್,ಎಸ್,ಕೆ ಮೇಡಮ್ ,
ನಾನು ತು೦ಬಾ ಸಲ ಬ೦ದು ನೀವು ಅಪ್ಡೇಟ್ ಮಾಡಿಲ್ಲ ಎ೦ದು ವಾಪಾಸು ಹೋಗುತ್ತಿದ್ದೆ . ನಿಮ್ಮ ಎಲ್ಲ ಅನುಭವವನ್ನು ಈಗ ನಮ್ಮೋ೦ದಿಗೆ ಹ೦ಚಿ ಕೊಳ್ಳಿ .
ಪುನರಾಗಮನಕ್ಕೆ ಮತೊಮ್ಮೆ ಸ್ವಾಗತ .:-) :-). ನಿಮ್ಮ ದುಃಖ ಕ್ಕೆ ನಾವು ಬಾಗಿ ಗಳಾಗುತ್ತೇವೆ .ನಮ್ಮೊ೦ದಿಗೆ ನಿಮ್ಮ ಸುಖ ,ದುಃಖ ಎಲ್ಲವನ್ನು ಹ೦ಚಿ ಕೊ೦ಡು ಹಗುರಾಗಿ .

SSK said...

ರೂಪ ಅವರೇ,
ಥ್ಯಾಂಕ್ ಯೂ ವೆರಿ ಮಚ್.
ಖಂಡಿತ, ನನ್ನ ಭಾವನೆಗಳನ್ನು ಲೇಖನದ ಮೂಲಕ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ.
ನಿಮ್ಮನ್ನು ಕಾಯಿಸಿದ್ದಕ್ಕೆ ಕ್ಷಮೆಯಿರಲಿ, ನಿಮ್ಮ ನಿರಂತರ ಭೇಟಿಗೆ ಧನ್ಯವಾದಗಳು.

ಶಿವಪ್ರಕಾಶ್ said...

SSK ಅವರೇ,
ನೀವು ಬ್ಲಾಗ್ ಲೋಕಕ್ಕೆ ಮರಳಿದ್ದು ನಮಗೆ ತುಂಬಾ ಸಂತೋಷವಾಯಿತು.
ನೀವು ಕೂಡ ನನ್ನ ಹಾಗೆ ಬ್ಲಾಗ್ ಲೋಕದಿಂದ ದೂರವಾಗಿದ್ದ ವಿಚಾರ ತಿಳಿದಿರಲಿಲ್ಲ. ನಿಮ್ಮ ಪ್ರತಿಕ್ರಿಯ ಓದಿದಾಗ ತಿಳಿಯುತು.
ನಾನು ಸಹ ಕೆಲವು ವಯ್ಯುಕ್ತಿಕ ತೊಂದರೆಗಳಿಂದ, ಕೆಲವು ದಿನ ಬ್ಲಾಗ್ ಲೋಕದಿಂದ ದೂರವಾಗಿದ್ದೆ.
ನನ್ನ ಬ್ಲಾಗ್ನಲ್ಲಿ ನೀವು ಬರೆದ ಪ್ರತಿಕ್ರಿಯೆ ಓದಿ, ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನಾನು ಮಾತುಬಂದ ಮೂಖನಾಗಿದ್ದೇನೆ.
ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.
ಧನ್ಯವಾದಗಳು

ಧರಿತ್ರಿ said...

ಬರೆಯಿರಿ ರಂಜನಾ...ಗುಡ್ ಲಕ್..

ಓದಕ್ಕೆ ರೆಡಿಯಾಗಿದ್ದವಿ..

ನಿಮ್ಮನ್ನು ಮರೆತಿಲ್ಲ ಗೆಳತೀ...

-ಧರಿತ್ರಿ