ಆಗಸ್ಟ್ ೨೨ ರಂದು ಬ್ಲಾಗಿಗರ ಸಂತೋಷ ಕೂಟವಂತೆ.......!!! ಇದೆ ಸಂತೋಷದಲ್ಲಿ ಉತ್ಸಾಹಿಯಾಗಿ ಕಾಯುತ್ತಿದ್ದೇನೆ ಆ ದಿನ ಬರುವುದೆಂತೋ.....?
ಸ್ನೇಹಿತರೆ ಈ ಸಂತೋಷ ಸಮಾರಂಭದಲ್ಲಿ ಯಾರ್ಯಾರು ಭೇಟಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇದೆ ಖುಷಿಯಲ್ಲಿ, ನನ್ನ ಹುಚ್ಚು ಮನಸ್ಸಿನ ಒಂದು ಪುಟ್ಟ ಕವನ.....!?!
ಬ್ಲಾಗಿಗರ ಕೂಟ
ನಲಿವಿನ ನೋಟ
ಹರಟೆಯ ತೋಟ
ಪರದೆಯ ಆಟ
ಮುಗಿಸುವ ಮಾಟ
ಕರೆಸಿದೆ ಕೂಟ
ಬೆರೆಯುವ ಆಟ
ಕಲೆಸಿದೆ ಪಾಠ
ಒಲವಿನ ಊಟ
ಸಮಯದ ಓಟ
ಆಗಲಿ ದಿಟ
ಸೇರುವರೆಲ್ಲರು ಪಟ, ಪಟ......!!!!!
13 comments:
ಅಹುದಹುದು ದಿಟ
ಬ್ಲಾಗಿಗರ ಕೂಟ
ಬರುವುದು ಪಟಪಟ
ನೆನೆದರೆ
ಹೃದಯ ಚಟಪಟ!
ಸುಂದರವಾಗಿದೆ.
ನಿಮ್ಮಮಾತಿಂದ ಶುರುವಾಯ್ತು ಆಟ
ಬಂದೆ ನಿಮ್ಮಲ್ಲಿಗೆ ಬ್ಲಾಗ್ ನೋಡಲು ದಿಟ
ಏನಿದು ಅರ್ಧವಾರ್ಷಿಕ ವೇ ..? ಅಕಟಕಟ
ಜೀವನ ಸಂಜೀವನ ಮೂಡಿ ಬರಲಿ ಪಟಪಟ
ನಿಮ್ಮಲ್ಲಿ ಬಂದು ನಿಮಗೆ ಕಚಗುಳಿ ಇಟ್ಟು ಮತ್ತೆ ನನ್ನ ಬ್ಲಾಗಲ್ಲಿ ನಿಮಗೆ ಉತ್ತರಿಸುತ್ತಿದ್ದೇನೆ...
ಸರ್,
ನಿಜ ನಿಜ,
ನಾವೆಲ್ಲರೂ ಸೇರಿದರೇ
ಅದೊಂದು ತುಂಬು ಆತ್ಮೀಯತೆ
ಸಂಬ್ರಮದ
ನಲಿವಿನ ಕೂಟ
ಮನದಾಳದ ಪ್ರವೀಣ್ ಅವರೇ, ನನ್ನ ಬ್ಲಾಗಿಗೆ ಸ್ವಾಗತ!
ನಿಮ್ಮ ಮೆಚ್ಚುಗೆಯ ನುಡಿಗಳು ನನಗೆ ಖುಷಿ ತಂದುಕೊಟ್ಟಿದೆ!!
ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ!!!
ಧನ್ಯವಾದಗಳು.
ಅಜಾದ್ ಅವರೇ,
ಏನಿದು ಅರ್ಧವಾರ್ಷಿಕವೇ...? ಅಕಟಕಟ.....! ಈ ಸಾಲನ್ನು ಓದಿ ತುಂಬಾ ನಗು ಬಂತು.
ನಿಮ್ಮ sense-of-humor ನನಗೆ ತುಂಬಾ ಇಷ್ಟವಾಗುತ್ತದೆ!!
ನೀವು ನನ್ನ ಹೆಸರನ್ನು ತಿಳಿದುಕೊಳ್ಳಲು ಆಗಸ್ಟ್ ೨೨ ರ ವರೆಗೂ ಕಾಯಬೇಕು.....!?!
ಅಕಸ್ಮಾತ್ ಆ ದಿನ ಕಾರಣಾಂತರಗಳಿಂದ ಭೇಟಿಯಾಗದಿದ್ದಲ್ಲಿ ನಂತರ ಎಂದಾದರೂ ಖಂಡಿತ ತಿಳಿಸುತ್ತೇನೆ !!!
ಅಲ್ಲಿಯವರೆಗೂ ನಿರೀಕ್ಷಿಸಿ.....ಆಯಿತಾ.....ಟಾಟಾ......ಬಾಯ್ ಬಾಯ್. (good boy, lifebouy etc., :) )
ಶಿವೂ ಅವರೇ, ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
ಎಲ್ಲರೂ ಭೇಟಿಯಾಗುವ ದಿನಾಂಕ ನಿಗದಿಯಾಯಿತು ಮತ್ತೆ ಸ್ಥಳದ ಬಗ್ಗೆ ಯಾವಾಗ ತಿಳಿಸುತ್ತೀರಾ?
Thanks a lot MANASU.
nice
11
Thank you sitaram sir.
manada tumulavannu baNNisida kavana chennaagide.......... .. banni nanna blog manege..... sigona kootadalli........
ದಿನಕರ್ ಅವರೇ,
ನನ್ನ ಬ್ಲಾಗಿಗೆ ಸ್ವಾಗತ! ನಿಮ್ಮ ಬ್ಲಾಗ್ನಲ್ಲಿ ಸುಳಿದಾಡಿ ಬಂದೆ. ಹಲವಾರು ಲೇಖನ ಮತ್ತು ಕವಿತೆಗಳನ್ನು ಓದಿದೆ.
ಸಮಯ ಸಿಕ್ಕಾಗ ಬಾಕಿ ಲೇಖನಗಳನ್ನು ಸಹ ಓದುತ್ತೇನೆ. ನಿಮ್ಮ ಬರಹಗಳು ಇಷ್ಟವಾಯಿತು.....!
ನೀವು ನನ್ನ ಬ್ಲಾಗಿಗೆ ಬಂದದ್ದು ತುಂಬಾ ಸಂತೋಷ ತಂದಿದೆ.
ನಿಮ್ಮ ಅನಿಸಿಕೆ, ಅಭಿಪ್ರಾಯಕ್ಕೆ ಧನ್ಯವಾದಗಳು.
ಹೀಗೆ ಭೇಟಿ ನೀಡುತ್ತಿರಿ.
sundara koota
Thank you GURUJI.
Post a Comment