ಈ ಕಥೆ ಕೇವಲ ಕಾಲ್ಪನಿಕ, ಯಾವುದೇ ವ್ಯಕ್ತಿ ಅಥವಾ ವಿಚಾರಗಳ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ !
ಮುಚ್ಚಿದ್ದ ದೇವಸ್ಥಾನದ ಹೊರಗಿನ ಜಗುಲಿಯ ಮೇಲೆ ಒಬ್ಬಂಟಿಯಾಗಿ ಕುಳಿತಿದ್ದ ರಾಮಯ್ಯನವರು, ಅಷ್ಟೇನೂ ಬಿಸಿಲಿಲ್ಲದ ಮಧ್ಯನ್ಹದಲ್ಲಿ, ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತಾ ಹಾಗೆಯೇ ಅನ್ಯ ಮನಸ್ಕರಾಗಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು.
ಅವರನ್ನು ಗಮನಿಸಿ ನೋಡುವ ಯಾರಿಗಾದರೂ ತಿಳಿಯುತ್ತಿತ್ತು ಅವರು ಜೀವನದಲ್ಲಿ ದುಡಿದೂ ದುಡಿದೂ ಬಳಲಿರುವ ಕಷ್ಟ ಜೀವಿ ಎಂದು!
ಆಗಿನ ಕಾಲದ ನಿಯಮವೆಂಬಂತೆ, ತಕ್ಕಮಟ್ಟಿಗೆ ಓದು ಮುಗಿಸಿ, ಕೆಲಸಕ್ಕೆ ಸೇರಿ,
ಹಿರಿಯರು ಒಪ್ಪಿ ಮಾಡಿದ ಸಂಪ್ರದಾಯ ಮದುವೆಯಿಂದ, ಮಡದಿಯ ಜೊತೆ, ಬರುವಷ್ಟು ಸಂಬಳದಲ್ಲೇ ತೃಪ್ತ ಜೀವನ ಸಾಗಿಸುತ್ತಿದ್ದರು ರಾಮಯ್ಯ! ರಾಮಯ್ಯನವರ ಹೆಂಡತಿ ಜಾನಕಮ್ಮನವರು. ಅನ್ಯೋನ್ಯ ದಾಂಪತ್ಯ ಇವರದು.
ಹಿರಿಯರೆಂದರೆ ಗೌರವ, ಭಯ ಭಕ್ತಿ, ಪೂಜ್ಯನೀಯ ಭಾವನೆ ಮತ್ತು ಸೇವಾ ಮನೋಭಾವ ಇಬ್ಬರಲ್ಲೂ ಸಮಾನವಾಗಿತ್ತು. ಆದ್ದರಿಂದ ಇವರೂ ಆದರ್ಶ ದಂಪತಿಗಳಾಗಿಯೂ ಹೆಸರಾಗಿದ್ದರು! ಜೀವನದ ಬಂಡಿ ಸಾಗುತ್ತಿತ್ತು.
ಮನೆಯವರ ಅವಶ್ಯಕತೆ, ಮಕ್ಕಳ ವಿಧ್ಯಾಭಾಸ ಎಲ್ಲವನ್ನೂ ತಮಗೆ ಬರುತ್ತಿದ್ದ ನಾಲ್ಕಂಕೆ ಸಂಬಳದಲ್ಲೇ ಸರಿದೂಗಿಸುತ್ತಿದ್ದರು.
ಮಕ್ಕಳು ಬೆಳೆದು ದೊಡ್ದವರಾಗುವಷ್ಟರಲ್ಲಿ ತಮ್ಮ ಕಷ್ಟಾರ್ಜಿಥದಿಂದ ಒಂದು ಸ್ವಂತ ಮನೆಯನ್ನು ಮಾಡಿಕೊಂಡರು. ನಂತರದಲ್ಲಿ ಮಕ್ಕಳ ವಿಧ್ಯಾಭ್ಯಾಸ ಮುಗಿದು, ಅವರು ಕೆಲಸಕ್ಕೆ ಸೇರಿ ಅವರುಗಳಿಗೆ ಮದುವೇ ಮತ್ತು ಇತರ ಸಮಾರಂಭಗಳನ್ನು ಮಾಡಿ ಮುಗಿಸುವ ಹೊತ್ತಿಗೆ, ರಾಮಯ್ಯನವರ ನಿವೃತ್ತಿಯ ಸಮಯವೂ ಬಂದಿತು. ತಮ್ಮ ದುಡಿಮೆ ಮತ್ತು ಪತ್ನಿಯ ಸಹಕಾರದಿಂದ, ಜೀವನದ ಏಳು ಬೀಳು, ಕಷ್ಟಸುಖ, ಜೀವನದ ಜಂಜಾಟ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ಪೂರೈಸಿದ್ದರು!!
ನಿವೃತ್ತರಾದಮೇಲೆ, ತಮ್ಮ ಜೀವನ ಸಂಜೆಯನ್ನು ತಮ್ಮವರೊಂದಿಗೆ ಆರಾಮವಾಗಿ ಕಳೆಯಬೇಕೆಂದು ಕೊಂಡಿದ್ದ ರಾಮಯ್ಯನವರಿಗೆ ಮತ್ತು ಜಾನಕಮ್ಮನವರಿಗೆ, ಬದಲಾದ ಮನೆಯ ಪರಿಸ್ಥಿತಿಯನ್ನು ನೋಡಿ ಮನಸ್ಸಿಗೆ ನೋವು ಉಂಟಾಗುತ್ತಿತ್ತು! ಒಳ್ಳೆಯ ಸಭ್ಯತೆ, ಸಂಸ್ಕಾರಗಳನ್ನು ನೀಡಿ ಬೆಳೆಸಿದ್ದ ಮಕ್ಕಳೂ ತಮ್ಮ ತಮ್ಮ ಮದುವೆಯ ನಂತರ ಅವರುಗಳ ಬದಲಾದ ಬುದ್ಧಿಯನ್ನೂ ಕಂಡು ದಂಪತಿಗಳಿಗೆ, ಅಲ್ಲಿನ ಸ್ಥಿತಿ ಅಸಹನೀಯವೆನಿಸುತ್ತಿತ್ತು....!
ಇದೆ ಕೊರಗಿನಲ್ಲೇ ಒಂದು ದಿನ ಜಾನಕಮ್ಮನವರು ಕೊನೆಯುಸಿರೆಳೆದರು. ಪತ್ನಿಯ ಅಗಲಿಕೆಯ ನೋವಿಗಿಂತಾ ಹೆಚ್ಚಾಗಿ, ತಮ್ಮ ಮಕ್ಕಳ ನಡವಳಿಕೆ, ಸೊಸೆಯರ ದಬ್ಬಾಳಿಕೆ, ಉದಾಸೀನ ಎಲ್ಲವನ್ನೂ ಅನುಭವಿಸುತ್ತಿದ್ದ ರಾಮಯ್ಯನವರಿಗೆ ಜೀವನವೇ ಭಾರವಾಗಿತ್ತು.
ಮನೆ ಮತ್ತು ಮಕ್ಕಳ ಏಳಿಗೆಗಾಗಿ ತಮ್ಮ ಜೀವನ ಸವೆಸಿದ್ದ ದಂಪತಿಗಳಿಗೆ ಜೀವನ ಸಂಧ್ಯೆಯಲ್ಲಿ ಸುಖ ಸಂತೋಷ ಎಂಬುದು ಮರೀಚಿಕೆಯಾಗಿತ್ತು! ಈಗ ರಾಮಯ್ಯನವರು ನೊಂದ ಒಂಟಿ ಜೀವ.
ತಮ್ಮ ಕಾಲದಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ, ಬದಲಾದ ಈ ಕಾಲದಲ್ಲಿ ತಮಗೆ ಸಿಗುತ್ತಿರುವ ಈ ರೀತಿಯ ಗೌರವ ಎರೆಡನ್ನೂ ನೆನೆದು ಅವರ ದುಃಕ್ಕದ ಕಟ್ಟೆಯೊಡೆದು ಕಣ್ಣಂಚಿನಲ್ಲಿ ನೀರು ಜಿನುಗಿತ್ತು!
ತಂದೆಯಿಂದ ಬಂದ ಮನೆ ಮತ್ತು ಆಸ್ತಿಯನ್ನು ಅನುಭವಿಸುವುದು ತಮ್ಮ ಹಕ್ಕೆಂದು ತಿಳಿದ ಮಕ್ಕಳು, ಅದಕ್ಕೆ ಕಾರಣರಾದವರನ್ನೇ ಭಾರ, ಬೇಕಾಬಿಟ್ಟಿ ಎಂದು ಭಾವಿಸುವ ಮಕ್ಕಳಿಗೆ, ಆ ಹಿರಿ ಜೀವ ಆ ನೊಂದ ಮನಸ್ಸಿನಲ್ಲೂ ತಮ್ಮ ಮಕ್ಕಳಿಗೆ ಒಳ್ಳೆಯದು ಮಾಡೆಂದು ದೇವರಲ್ಲಿ ಪ್ರಾರ್ಥಿಸುತ್ತಾ, ಭಾರವಾದ ಮನಸ್ಸಿನಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು........!!!
ಇಲ್ಲಿ ಬರೆದಿರುವ ಈ 'ಸಣ್ಣ ಕಥೆ' ಸಮಾಜದಲ್ಲಿ ನೈಜ ಘಟನೆಯೂ ಇರಬಹುದು! ಎಲ್ಲರೂ ಹೀಗೆ ಇರುತ್ತಾರೆಂದೇನೂ ಇಲ್ಲಾ.
ಇದು ಕೇವಲ ನಾಣ್ಯದ ಒಂದು ಮುಖದಂತೆ ಎಂದರೆ ತಪ್ಪಾಗಲಾರದು ಅಲ್ಲವೇ?
8 comments:
ಇದು ಕಥೆಯಲ್ಲ ಜೀವನ ಅಂದರೂ ತಪ್ಪಾಗಲಾರದು SSK ಯವರೇ
ದಿನನಿತ್ಯ ಎಲ್ಲೆಡೆ ನಡೆಯುತ್ತಿರುವ ಘಟನೆ..
edu namma sutta mutta nadevude agide.. sundara baraha..
ದಿಲೀಪ್ ಹೆಗ್ಡೆ ಅವರೇ,
ಕಥೆ ಮತ್ತು ಬರಹಗಳು ಸಮಾಜವನ್ನು ಬಿಂಬಿಸುವ ಕನ್ನಡಿಯಂತೆ ಅಲ್ಲವೇ.
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ವಾಣಿಶ್ರೀ ಭಟ್ ಅವರಿಗೆ ಸ್ವಾಗತ!
ಲೇಖನ ಓದಿ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಹೀಗೆ ಭೇಟಿ ನೀಡುತ್ತಿರಿ.
tumba chennagide kathe.... ide reeti ella kade nedeyodu.......
Idu katheyalla madam... nija jeevanadalli heegeye nadeyuttidde.... :(
tumbaa chennagi barediddiraa
ಇದನ್ನು ಕತೆಯೆಂದುಕೊಂಡು ಓದಿದರೂ ಎಲ್ಲಾ ಕಡೆ ಹೀಗೆ ನಡೆಯುವ ವಿಚಾರವನ್ನು ವಾಸ್ತವವಾಗಿ ಬರೆದಿದ್ದೀರಿ...
ಚೆನ್ನಾಗಿದೆ ಸಣ್ಣ ಕತೆ.
Post a Comment