Saturday, November 13, 2010

ಭಾವನೆಗಳ ಪುಳಕ.....!



ಬಾಳೊಂದು ಭಾವಗೀತೆ
ನೀನದರ ಪ್ರೇಮಗೀತೆ!

ಬಾಳೊಂದು ಪುಷ್ಪವನ
ನೀನದರೊಳಗೆ ನಲಿವ ಸುಮ!

ಬಾಳೊಂದು ಜ್ಞಾನ ಮಂದಿರ
ನಿನ್ನಿಂದಲೇ ಈ ಬಾಳು ಸುಂದರ!

ಬಾಳೊಂದು ಹರಿವ ನದಿ
ನಿನ್ನಲ್ಲೇ ಬೆರೆವುದು ನನ್ನೀ ಹಾದಿ!

ಬಾಳೊಂದು ಭಕ್ತಿ ದೇಗುಲ
ನೀನಿರಲು ಮನವಾಗುವುದು ಕೋಮಲ!

ಬಾಳೊಂದು ಸಪ್ತ ಸಾಗರ
ನೀನೆನಗೆ ನೀಡಿದಾ ಪ್ರೀತಿ ಅಪಾರ!

ಒಲವು, ಚೆಲುವು, ಬಲವು, ಗೆಲುವು, ಛಲವು ಎಲ್ಲ ನಿನ್ನಿಂದ, ಸಂಗಾತಿ ನಿನ್ನ ಜೊತೆಜೊತೆಯಲಿ ನಾ ನಡೆಯುತಿರಲು ಈ ಬಾಳಿನಲ್ಲಿ ನೀ ತುಂಬಿದೆ ನಿರಂತರ ಆನಂದ!!