ಬಾಳೊಂದು ಭಾವಗೀತೆ
ನೀನದರ ಪ್ರೇಮಗೀತೆ!
ಬಾಳೊಂದು ಪುಷ್ಪವನ
ನೀನದರೊಳಗೆ ನಲಿವ ಸುಮ!
ಬಾಳೊಂದು ಜ್ಞಾನ ಮಂದಿರ
ನಿನ್ನಿಂದಲೇ ಈ ಬಾಳು ಸುಂದರ!
ಬಾಳೊಂದು ಹರಿವ ನದಿ
ನಿನ್ನಲ್ಲೇ ಬೆರೆವುದು ನನ್ನೀ ಹಾದಿ!
ಬಾಳೊಂದು ಭಕ್ತಿ ದೇಗುಲ
ನೀನಿರಲು ಮನವಾಗುವುದು ಕೋಮಲ!
ಬಾಳೊಂದು ಸಪ್ತ ಸಾಗರ
ನೀನೆನಗೆ ನೀಡಿದಾ ಪ್ರೀತಿ ಅಪಾರ!
ಒಲವು, ಚೆಲುವು, ಬಲವು, ಗೆಲುವು, ಛಲವು ಎಲ್ಲ ನಿನ್ನಿಂದ, ಸಂಗಾತಿ ನಿನ್ನ ಜೊತೆಜೊತೆಯಲಿ ನಾ ನಡೆಯುತಿರಲು ಈ ಬಾಳಿನಲ್ಲಿ ನೀ ತುಂಬಿದೆ ನಿರಂತರ ಆನಂದ!!
18 comments:
ಎಲ್ಲಿದೆ ನಿಮ್ಮ ಬರಹ
ಮಹೇಶ್, ಮತ್ತೊಮ್ಮೆ ನೋಡಿ, ಈಗಿದೆ ಅಲ್ಲಿ ಬರಹ!
ಶೋಭ ಮೇಡಮ್,
ಸರಿಸುಮಾರು ಎರಡು ತಿಂಗಳ ನಂತರ ಹೊಸದಾಗಿ
ಭಾವನೆಗಳ ಪುಳಕ ಕವನ ಚೆನ್ನಾಗಿ ಬರೆದಿದ್ದೀರಿ..
ಮತ್ತೆ ಮುಂದಿನ ಭಾನುವಾರ [ನವೆಂಬರ್ 21]ರಂದು ಮತ್ತೆ ನಾವೆಲ್ಲಾ ಸಸ್ಯವನಕ್ಕೆ ಹೋಗುತ್ತಿದ್ದೇವೆ. ಕಳೆದ ಭಾರಿ ನೀವು ತಪ್ಪಿಸಿಕೊಂಡ ನೀವು ಈ ಭಾರಿ ತಪ್ಪಿಸಿಕೊಳ್ಳಬೇಡಿ. ಅದರ ವಿವರಗಳಿಗಾಗಿ ನನಗೆ ಅಥವ ಪ್ರಕಾಶ್ ಹೆಗಡೆಯವರಿಗೆ ಫೋನ್ ಮಾಡಿ ಖಚಿತಮಾಡಿಕೊಳ್ಳಿ..
ಎಷ್ಟೊಂದು ತರಹದ ಬಾಳು...
ಚೆನ್ನಾಗಿದೆ...
chennagide...
ಜೀವನವನ್ನು ಎಷ್ಟು ರೀತಿಯಲ್ಲಿ ಅರ್ಥೈಸಿದರೂ ಅಸಂಖ್ಯ ಅರ್ಥಗಳು ಸಿಗುತ್ತಲೇ ಇರುತ್ತದೆ. ಸರಳವಾಗಿ ಬರೆದಿದ್ದೀರಿ
sogasaagide saalugaLu.
sogasaagide saalugaLu.
ಶಿವೂ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!
ಸಸ್ಯವನಕ್ಕೆ ಬರುವ ಬಗ್ಗೆ ಯೋಚಿಸುತ್ತೇನೆ,
ವಿಷಯ ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಸಸ್ಯವನಕ್ಕೆ ಬರಬೇಕೆಂದೇ ಆಸೆ...., ಆದರೆ ಪ್ರಯತ್ನಿಸುತ್ತೇನೆ.
ಮಹೇಶ್ ಅವರೇ, ಕವನ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್!
ನಿಮ್ಮಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲಾ....., ಆದರೆ ಒಂದು ಪುಟ್ಟ ಪ್ರಯತ್ನ ಅಷ್ಟೇ! :)
ವಾಣಿಶ್ರೀ ಭಟ್ ಅವರೇ, ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ.... ಥ್ಯಾಂಕ್ಸ್.
ದೀಪಸ್ಮಿತಾ ಅವರೇ, ನಿಮ್ಮ ಮಾತು ನಿಜ ಅದಕ್ಕೆ ಇಲ್ಲಿ ಜೀವನವನ್ನು ಸಪ್ತ ಸಾಗರಗಳಿಗೆ ಹೋಲಿಸಿದ್ದೇನೆ!
ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಹೀಗೆ ಭೇಟಿ ನೀಡುತ್ತಿರಿ.
ಧನ್ಯವಾದಗಳು ಮನಮುಕ್ತಾ ಅವರೇ, ಹೀಗೆ ನಿಮ್ಮ ಪ್ರೋತ್ಸಾಹ ಸದಾ ದೊರೆಯುತ್ತಿರಲಿ. ಹೀಗೆ ಭೇಟಿ ನೀಡುತ್ತಿರಿ.
ಶೋಭಾವ್ರೆ...ಏನ್ರೀ ಈ ಮಧ್ಯೆ ಕಾಣ್ತಾನೇ ಇಲ್ಲ....ಭಾವನೆಗಳ ಪುಳಕ ಪುಳಕಿತಗೊಂಡ ಭಾವನೆಯ ಕಾರಣವೇ...? ಚನ್ನಾಗಿವೆ ಮಂಥನದ ಸಾಲುಗಳು...
ಬಾಳೊಂದು ಪುಷ್ಪವನ
ನೀನದರೊಳಗೆ ನಲಿವ ಸುಮ
ಚೆನ್ನಾಗಿದೆ ಮೇಡಂ...
ಕವನಗಳಿಗೆ ನಮ್ಮ ಪತ್ರಿಕೆಯಲ್ಲಿ ಅವಕಾಶವಿದೆ. ಬರೆಯಿರಿ
hosasuppliment@gmail.com
ಚಿತ್ರಾ
nice mam
nice words mam
nice words mam
Post a Comment