ಆಗ ಅಲ್ಲಿ ಯಾರೋ ತಂದು ಹಾಕಿದ್ದ "ಜೀವನದ ನೀತಿ ಸೂತ್ರಗಳು " ಎನ್ನುವ ಅರ್ಥವತ್ತಾದ ಬರಹ ಓದಿದೆ.
ಅದನ್ನು ಓದಿದ ನಂತರ ನಾನು, ಈ ಸೂತ್ರಗಳನ್ನು ಯಾಕೆ ಎಲ್ಲರೊಂದಿಗೆ ಹಂಚಿಕೊಳ್ಳಬಾರದು, ಇದನ್ನು ನನ್ನ ಬ್ಲಾಗ್ನಲ್ಲಿ ಹಾಕೋಣವೆಂದು ನಿಶ್ಚಯಿಸಿದೆ. ಈ ಉಪಯುಕ್ತವಾದ ಸೂತ್ರಗಳನ್ನು ಇಲ್ಲಿ ಬರೆದಿದ್ದೇನೆ ಓದಿ.!
"ಜೀವನದ ನೀತಿ ಸೂತ್ರಗಳು "
- ಗುಣವಿಲ್ಲದಿದ್ದರೆ ರೂಪ ವ್ಯರ್ಥ
- ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ
- ಉಪಯೋಗಿಸದಿದ್ದರೆ ಧನ (ಹಣ) ವ್ಯರ್ಥ
- ಹಸಿವೆಯಿಲ್ಲದಿದ್ದರೆ ಭೋಜನ ವ್ಯರ್ಥ
- ಪ್ರಜ್ಞೆಯಿಲ್ಲದಿದ್ದರೆ ಪ್ರತಿಭೆ ವ್ಯರ್ಥ
- ಗುರಿಯಿಲ್ಲದಿದ್ದರೆ ಸಾಧನೆ ವ್ಯರ್ಥ
- ಪರಮಾತ್ಮನ ಅರಿಯದಿದ್ದರೆ ಜೀವನವೇ ವ್ಯರ್ಥ
ಕ್ರೋಧ ಬುದ್ದಿಯನ್ನು ತಿನ್ನುತ್ತದೆ .
ಅಹಂಕಾರ ಜ್ಞಾನವನ್ನು ತಿನ್ನುತ್ತದೆ .
ಮೋಹ ಮರ್ಯಾದೆಯನ್ನು ತಿನ್ನುತ್ತದೆ.
ಲಂಚ ಗೌರವವನ್ನು ತಿನ್ನುತ್ತದೆ .
ಪ್ರಾಯಶ್ಚಿತ್ತ ಪಾಪವನ್ನು ತಿನ್ನುತ್ತದೆ.
ಚಿಂತೆ ಆಯುಷ್ಯವನ್ನು ತಿನ್ನುತ್ತದೆ .
ಈ ನೀತಿ ಮಾತುಗಳು ಎಷ್ಟು ಅರ್ಥಪೂರ್ಣವಾಗಿದೆ ಅಲ್ಲವೇ?
ಈ ಸೂತ್ರಗಳನ್ನು ಯಾರು ಯಾರು ಎಷ್ಟೆಷ್ಟು, ಅವರವರ ಜೀವನದಲ್ಲಿ ಅಳವಡಿಸಿಕೊಂದಿರುತ್ತಾರೋ ಗೊತ್ತಿಲ್ಲಾ! ಅದೆಲ್ಲ ಅವರವರಿಗೆ ಬಿಟ್ಟಿದ್ದು .
ನಾನು ಇಲ್ಲಿ ಬರೆದದ್ದು ನಿಮಗೆಲ್ಲ ಇಷ್ಟವಾದರೆ ಮೆಚ್ಚಿ, ಇಲ್ಲವಾದರೆ ಹಾಗೆ ಸುಮ್ಮನೆ ಓದಿ ಬಿಟ್ಟುಬಿಡಿ!
ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
2 comments:
ನೀತಿ ಸೂತ್ರಗಳು ಚೆನ್ನಾಗಿವೆ... "ಪ್ರಜ್ಞೆಯಿಲ್ಲದಿದ್ದರೆ ಪ್ರತಿಭೆ ವ್ಯರ್ಥ" ಬಹಳ ಅರ್ಥಪೂರ್ಣ.. ಪ್ರತಿಭೆ ಏನಿದೆ ಅನ್ನುವ ಪ್ರಜ್ಞೆ ಇಲ್ಲದಿದ್ದರೆ ಅದು ವ್ಯರ್ಥವೇ ಸರಿ..
Prabhu avarige, blog ge beti kottiddakke dhanyavaadagalu. Nimma abhipraaya odi santoshavaayithu!
Post a Comment