ಇಲ್ಲಿ ಅವರ ಮೂವರ ಜೀವನದ ನಿರ್ಧಾರ ಕೊನೆಗೂ ಒಂದೇ ಆಗಿತ್ತು!!! ಅದೇನೆಂದರೆ ಸ್ನೇಹದಲ್ಲಿ, ಪ್ರೀತಿಯಲ್ಲಿ ನಾವೆಂದೆಂದು ಒಂದೇ ಎನ್ನುವ ತಾರಕ ಮಂತ್ರ ಅವರುಗಳ ಮನದಲ್ಲಿ ಒಂದೇ ರೀತಿಯ ಭಾವನೆಯನ್ನು ಮೂಡಿಸಲು ವಿಧಿ ಅವರಿಗೆ ಸಹಕರಿಸಿತ್ತು!
ಹೇಗೆಂದರೆ, ಇತ್ತ ವಸುಧಾಳ ಆಲೋಚನೆಗಳು ಇದ್ದುದೇನೆಂದರೆ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿದರೆ ಇನ್ನೊಬ್ಬರಿಗೆ ನೋವುಂಟಾಗಿ, ನಮ್ಮ ಸ್ನೇಹಕ್ಕೆ ಧಕ್ಕೆ ಬರುತ್ತದೆ. ಅದು ನನಗೆ ಕನಸಿನಲ್ಲೂ ಇಷ್ಟವಾಗದ ಮಾತು!! ಇವರಿಬ್ಬರನ್ನೂ ಬಿಟ್ಟು ನಾನು ಬೇರೊಬ್ಬನನ್ನು ಮದುವೆಯಾದದ್ದೇ ಆದರೆ, ಅವನು ನಮ್ಮ ಸ್ನೇಹವನ್ನು ಅರ್ಥಮಾಡಿ ಕೊಳ್ಳುವವನಾದರೆ ಪರವಾಗಿಲ್ಲ ಇಲ್ಲದಿದ್ದರೆ ಅವನ ಸಂಶಯಕ್ಕೆ ನಾವು ಒಬ್ಬರಿಗೊಬ್ಬರು ಬೇರೆ ಆಗಬೇಕಾಗುತ್ತದೆ. ಅಥವಾ ಇದೇ ರೀತಿ ಅವರಿಬ್ಬರ ಪತ್ನಿಯರಲ್ಲಿ ಯಾರಾದರೂ ಹೀಗೆ ಇದ್ದರೇ..........? ಇದ್ಯಾವ ಗೋಜಲೂ ಬೇಡವೆಂದೇ ದೇವರು ನಮ್ಮನ್ನು ಈ ರೀತಿ ಒಂದು ಮಾಡಿರಬಹುದು! ಇದೇ ನಿಜವಾದರೆ ಅವನ ನಿಯಮ ಮುರಿಯುವ ಹಕ್ಕು ನಮಗ್ಯಾರಿಗೂ ಇಲ್ಲ ಅಲ್ಲವೇ. ಅದಕ್ಕೆ ನಾನು ಎಲ್ಲ ವಿಧದಲ್ಲೂ ಆಲೋಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದು ಎಂದು ತನ್ನ ಗೆಳತಿಯ ಬಳಿ ತನ್ನ ಮನದ ವಿಚಾರಗಳನ್ನು ಪ್ರಸ್ಥಾಪಿಸಿದ್ದಳು! ಇವಳ ಈ ಮಾತುಗಳನ್ನು ಕೇಳಿದ ಗೆಳತಿಯೂ ಸಹ ಅವಳ ನಿರ್ಣಯಕ್ಕೆ ತಲೆದೂಗಿ ಅವಳನ್ನು ಬೆಂಬಲಿಸಿದ್ದಳು.
ಅತ್ತ ಅವರಿಬ್ಬರೂ ಸಹ ಮರಗಳ ಮರೆಯಲ್ಲಿ ಮರೆಯಾಗಿ ಹೋಗಿ, ವಸುಧಾ ಇಬ್ಬರನ್ನು ಕುರಿತು ಇಬ್ಬರೂ ಇಂದು ಸರಿಯಾದ ನಿರ್ಧಾರ ಮಾಡಿಕೊಂಡು ಬನ್ನಿ ಎಂದು ಹೇಳಿದ್ದ ವಿಷಯದ ಬಗ್ಗೆ ಮತ್ತೇ ಸಾಕಷ್ಟು ಯೋಚಿಸಿ ತಲೆ ಕೆಡಿಸಿಕೊಂಡ ಮೇಲೆ, ಅಧ್ಬುತ, ಆಶ್ಚರ್ಯ ಎನ್ನುವಂತೆ ಆಕಾಶ್ ಮತ್ತು ಆದಿಗೂ ಸಹ ಒಮ್ಮೆಲೇ ನಾವುಗಳು ಯಾಕೆ ಇಬ್ಬರೂ ಅವಳನ್ನೇ ಮದುವೆಯಾಗಬಾರದು? ಒಂದು ವೇಳೆ ಅವಳು ಇದಕ್ಕೆ ಒಪ್ಪದಿದ್ದರೆ ನಾವುಗಳೇ ಅವಳಿಗೆ ತಿಳಿಸಿ ಹೇಳಿ ಹೇಗಾದರೂ ಒಪ್ಪಿಸೋಣ ಎಂದು ಕೆಲವು ಯೋಜನೆಗಳನ್ನು ಮಾಡಿಕೊಂಡು, ಅವರಿಬ್ಬರೂ ಸಹ ಇದಕ್ಕೇ ಬದ್ದರಾಗಿ ಇರುವ ಬಗ್ಗೆ ಒಬ್ಬರಿಗೊಬ್ಬರು ಪ್ರಮಾಣಿಸಿಕೊಂಡು, ಒಪ್ಪಿ ಅವಳಿರುವಲ್ಲಿಗೆ ಹೋದರು! ಅಲ್ಲಿಗೆ ಹೋದ ಮೇಲೆ ಅವಳಿಗೂ ಇದೇ ರೀತಿ ಆಲೋಚನೆಗಳಿದ್ದುದನ್ನು ಕೇಳಿ ತಿಳಿದ ಅವರು ಬೆಸ್ತೋ ಬೇಸ್ತು!!! ಅವರುಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಬಿಂದು ಅವರುಗಳನ್ನು ಕುರಿತು, ಚೆನ್ನಾಗಿವೆ ನಿಮ್ಮ ನಿಮ್ಮ ಆಲೋಚನೆಗಳು! ನಿಮಗೆ ಇಟ್ಟಿರುವ ಹೆಸರುಗಳನ್ನು ಸಾರ್ಥಕ ಮಾಡಿಕೊಂದ್ದೀರಿ! ವಸುಧಾ = ಭೂಮಿ, ಆಕಾಶ್ = ಆಗಸ ಮತ್ತು ಆದಿತ್ಯ = ಸೂರ್ಯ ಇವು ಮೂರು ಒಂದನ್ನೊಂದು ಬಿಟ್ಟಿರದ ಹಾಗೆ ನೀವುಗಳೂ ಸದಾ ಇದೇ ರೀತಿ ಜೀವನದ ಅಂತ್ಯದವರೆಗೂ ಒಂದಾಗಿರಿ! ಇದೇ ನನ್ನ ಆಶೀರ್ವಾದ, ಹಾರೈಕೆ ಎಲ್ಲವೂ ಎಂದು ಹೇಳುತ್ತಾ ವಸುಧಾಳನ್ನು ತಬ್ಬಿಕೊಂಡು, ಹಣೆಗೊಂದು ಮುತ್ತನ್ನಿಟ್ಟಳು. ಅದನ್ನು ನೋಡುತ್ತಾ ನಿಂತಿದ್ದ ಆಕಾಶ್ ಮತ್ತು ಆದಿ, ಹಲೋ ಮಿಸ್ ಬಿಂದು ಇದು ನಾವು ಮಾಡ ಬೇಕಾಗಿರುವ ಕೆಲಸ ಗೊತ್ತಾ.... ಎಂದು ಹೇಳುವಷ್ಟರಲ್ಲಿ ಇವರಿಬ್ಬರೂ ಹುಸಿಮುನಿಸು ತೋರಿಸುತ್ತಾ ಅವರಿಬ್ಬರ ಬೆನ್ನಟ್ಟಿ ಅವರನ್ನು ಗುದ್ದಲು ಹೋದಾಗ, ಅವರು ತಪ್ಪಿಸಿಕೊಳ್ಳಲು ಹೋಗಿ ಸಾಧ್ಯವಾಗದೇ ಸಿಕ್ಕಿ ಬಿದ್ದು ಗುದ್ದಿಸಿಕೊಂಡರು. ಅಲ್ಲಿ ಸಮುದ್ರದ ಅಲೆಗಳ ಭೋರ್ಗರೆತದೊಂದಿಗೆ ಇವರೆಲ್ಲರ ನಗುವೂ ಬೆರೆತು ಬಾಹ್ಯ ಪ್ರಪಂಚವನ್ನೇ ಮರೆಸಿತ್ತು!!!!!
.......ಮುಗಿಯಿತು.
19 comments:
SSK ಅವರೇ,
ನೀವು ಕಥೆ ಹೆಣದ ರೀತಿ ಚನ್ನಾಗಿದೆ.
ಆದರೆ ಕೊನೆ ಭಾಗದಲ್ಲಿರುವ ಅವರ ತೀರ್ಮಾನ ನನಗೆ ಇಷ್ಟವಾಗಲಿಲ್ಲ. ತಪ್ಪು ತಿಳಿಬೇಡಿ... ನನ್ನ ವಯುಕ್ತಿಕ ಅಭಿಪ್ರಾಯ ಅಸ್ಟೆ. (....ಅಥವಾ ನಾನು ಅರ್ಥ ಮಾಡಿಕೊಂಡಿದ್ದು ತಪ್ಪಾ ? )
ಇದು ನಮ್ಮ ಸಂಸ್ಕೃತಿಗೆ ವಿರುದ್ಧವಲ್ಲವೇ ?....
ನೀವೇ ಆಲೋಚಿಸಿ, ಇದು ಸರಿನಾ ?....
ನನ್ನ ಪ್ರಕಾರ, ಇದಕ್ಕೆ ಸೂಕ್ತ climax ಅಂದ್ರೆ ತಮಿಳಿನ "Kadhal Desam" ಚಿತ್ರದಲ್ಲಿರುವುದು.
ಇಲ್ಲವಾದರೆ ಇಬ್ಬರಲ್ಲಿ ಒಬ್ಬರನ್ನು ಮದುವೆಯಾಗುವುದು.
ಶಿವಪ್ರಕಾಶ್ ಅವರೇ,
ನಿಮ್ಮ ಅನಿಸಿಕೆ, ಅಭಿಪ್ರಾಯ ಸ್ವಾಗತಾರ್ಹವಾದುದು! ಇದಕ್ಕೆ ಧನ್ಯವಾದಗಳು!
ನಾನು ಎರಡು ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಕಥೆ ಹೆಣೆದದ್ದು. ಅದೇನೆಂದರೆ ಕಥೆಯ ಕೊನೆಯಲ್ಲಿ ತಿಳಿಸಿರುವ ಹಾಗೆ ಪ್ರಕೃತಿ ಪರವಾಗಿ ಅಂದರೆ ಭೂಮಿ, ಬಾನು, ಭಾಸ್ಕರ ಮತ್ತು ಮನುಷ್ಯರ ಸ್ನೇಹ/ಸಂಘ ಜೀವನದಲ್ಲಿ ಯಾರ್ಯಾರ ದಿಕ್ಕು ದೆಸೆಗಳು ಹೇಗೇಗೆ ಬದಲಾಗುತ್ತವೆ ಎಂದು ಹೇಳಲಿಕ್ಕೆ ಬರುವುದಿಲ್ಲ! ಎಲ್ಲಾ ವಿಧಿಯಾಟ ಎಂದೂ ಹೇಳಬಹುದು!!
good one ... nice story ..
Thanks a lot ROOPA! Keep comming....
ವಿಭಿನ್ನ ಅಂತ್ಯ. ಆದರೆ ಕಾನ್ಸೆಪ್ಟ್ ಹಳೆಯದಲ್ಲ ಎನ್ನುವುದಕ್ಕೆ ದ್ರೌಪದಿಯೇ ಸಾಕ್ಷಿ
ಆದರೆ ಸಮಾಜ ಮಾತ್ರ ಇನ್ನೂ ಇದಕ್ಕೆ ತೆರೆದುಕೊಂಡಿಲ್ಲ.
ಹಾಗಾಗಿ ಕಲ್ಪನೆ ಮಾತ್ರ ಚೆನ್ನಾಗಿರುತ್ತದೆ.
ಮೊದಲೆರೆಡು ಭಾಗ ಓದುವಾಗಲೇ ಹೀಗಾಗಬಹುದು ಎಂದನಿಸಿತ್ತು(ನಿಮ್ಮ ಶೀರ್ಷಿಕೆಯೇ ಅದನ್ನ ಸೂಚಿಸುತ್ತದೆ)
ಚೆನ್ನಾಗಿದೆ
ರೂಪ ಅವರೇ,
ನಿಮ್ಮ ಮಾತು ನಿಜ! ಕಥೆ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!
ಎಸ್ಸೆಸ್ಕೆ, ಅಲ್ಲರೀ ನಿಮ್ಮ ಹೆಸರಿನ ತರಹ ಎರಡು SS ಜೊತೆಗೆ K ನ ಸೇರಿಸೋದು..??..ಸೂರ್ಯ (ಸನ್) ಆಕಾಶ (ಸ್ಕೈ)..ಹೇಗೆ ಇದು ಸಾಧ್ಯ??
ಒಡಂಬಡಿಕೆಯ ನಿರ್ಧಾರ..ಇಬ್ಬರೂ ಲವ್ ಮಾಡೋದು ಓಕೆ..ಅದಕ್ಕೆ ನೀವು ಮದುವೆಯಲ್ಲಿ ಕೊನೆಗಾಣಿಸಿದ್ದೀರೋ ಗೊತ್ತಿಲ್ಲ... ದ್ರೌಪದಿಯ ಕಥೆ ಹಾಗೆ ಆದದ್ದು ಏಕೆ ಅಂತ ಎಲ್ಲರಿಗೂ ಗೊತ್ತಿದೆ.. ಅದರಿಂದ ಏನಾಯ್ತು ಅಂತಲೂ ಗೊತ್ತಿದೆ..(ಅದೇ ಅಲ್ಲವೇ ನಮ್ಮ ಕಥೆ ಪುರಾಣಗಳೂ ಸಮಾಜಕ್ಕೆ ತನ್ಮೂಲಕ ಕಲಿಸುವುದು).
ನನಗೇನೋ ಶಿವು ಅಭಿಪ್ರಾಯ ಸರಿ ಅನ್ನಿಸ್ತು...ನಿಮ್ಮ ಪ್ರಕಾರ ಅನ್ನೋಕೆ western countires ಗಿಂತಲೂ ಹೆಚ್ಚು ಉದಾರಿಗಳಾಗಬೇಕು..ಏಕೆಂದರೆ ಅವರೂ ಏಕ ಕಾಲಕ್ಕೆ ಇಬ್ಬರು ಗಂಡಂದಿರನ್ನು (ಗಮನಿಸಿ ಪುರುಷರಲ್ಲ,..) ಹೊಂದಿರುವುದಿಲ್ಲ. ಏನಂತೀರಿ...ಇದು ಕೇವಲ ಅಭಿಪ್ರಾಯವಷ್ಟೆ...ಕಥೆಗೆ ಅದರ ಧಾಟಿಗೆ ಎಅರ್ಡು ಮಾತಿಲ್ಲ.
ಜಲನಯನ ಅವರೇ,
ನನ್ನ ಬ್ಲಾಗಿಗೆ ಸುಸ್ವಾಗತ! ನೀವು ಕಥೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!!
ಈ ಒಂದು ವಿಷಯವನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ, ಸಮಾಜಕ್ಕೆ, ಸಂಸ್ಕೃತಿಗೆ ವಿರೋದವಾದುದು ಎಂದು ಎಲ್ಲರೂ ಹೇಳುತ್ತಾರೆ ನಿಜ! ಆದರೆ ಸ್ವಲ್ಪ ಆಲೋಚಿಸಿ ನೋಡಿ, ನಮ್ಮ ಸಮಾಜದಲ್ಲಿ, ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವುದಾದರೂ ಏನು? ಮದುವೆಯಾಗಿರುವವರು ಎಷ್ಟೋ ಮಂದಿ ಗುಟ್ಟಾಗಿ ಎರಡನೇ ಸಂಸಾರ ಹೂಡಿರುತ್ತಾರೆ, ಇಲ್ಲವೇ ದೊಡ್ಡವರ ಬಲವಂತಕ್ಕೆ ಮಣಿದು ಮದುವೆಯಾದ ಜೋಡಿಗಳಲ್ಲಿ ಅವರಿಗೆ ಮೊದಲೇ ಪ್ರೇಯಸಿ/ಪ್ರೇಮಿ ಇದ್ದು ಅವರನ್ನು ಬಿಟ್ಟಿರಲಾಗದಿದ್ದರೆ, ನಂತರದಲ್ಲೂ ಓಡಿಹೊಗಿರುವ ಅಥವ ಕೊಲೆ ಮಾಡಿಸುವ ಉದಾಹರಣೆಗಳು ಎಷ್ಟು ಸಿಗುವುದಿಲ್ಲ ಹೇಳಿ! ಇವ್ಯಾವುದನ್ನೂ ಸಮಾಜ ಅಥವಾ ಜನರು ಒಪ್ಪುವುದೇ ಇಲ್ಲ ಆದರೆ ಈ ರೀತಿ ನಡೆಯುವುದಂತು ನಿಂತಿಲ್ಲವಲ್ಲ!!! ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆಯೆಂಬುದೇ ಸಿಗುವುದಿಲ್ಲ ಅಲ್ಲವೇ? ಪ್ರಪಂಚ ಹೀಗಿರುವಾಗ ನಾನು ಬರೆದಿರುವ ಕಥೆಯ ಅಂತ್ಯ ಮೇಲಿನದಕ್ಕೆಲ್ಲ ಹೋಲಿಸಿದರೆ ಅದರಲ್ಲಿ ಅಸಭ್ಯವಾಗಲಿ, ಬಹಿಷ್ಕಾರಗಳಾಗಲಿ ಕಂಡು ಬರುವುದು ಉಚಿತವೇ? ಇದಕ್ಕೆ ನೀವೇನಂತೀರಾ?
ಕತೆಗೆ ಇನ್ನಸ್ಟು ರೋಚಕತೆ ಇದ್ದಿದ್ದರೆ ಚೆನ್ನಾಗಿರುತಿತ್ತು. ಓದಿಸಿಕೊಂಡು ಹೋಗುತ್ತದೆ.
ಅಗ್ನಿ ಅವರೇ,
ನನ್ನ ಬ್ಲಾಗಿಗೆ ಸ್ವಾಗತ! ಕಥೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!
ಇನ್ನಷ್ಟು ಸೇರಿಸ ಬಹುದಿತ್ತು ಆದರೆ ಕಥೆ ತುಂಬಾ ದೊಡ್ಡದಾಗಿ ಬಿಡುತ್ತದೆ ಎಂದುಕೊಂಡು ಅಲ್ಲಿಗೆ ಮುಗಿಸಿದೆ.
ನಿಮ್ಮ ಅಭಿಪ್ರಾಯಕ್ಕೆ ಮತ್ತೊಮ್ಮೆ ಧನ್ಯವಾದಗಳು. ಹೀಗೆ ಬರುತ್ತಾ ಇರಿ.....!
ಇದಕ್ಕೆ ಏನು ಕಾಮೇಂಟು ಕೊಡಲೂ ನನಗೆ ಹಿಂಜರಿತವಿದೆ, ಕಥೆ ಕಲ್ಪನೆಯಲ್ಲಿ ಚೆನ್ನಾಗಿದೆ ವಾಸ್ತವದಲಿ ಹೀಗೆ ಮಾಡಲು ಆಗಲ್ಲ, ಈಗಿನ ವಿಭಿನ್ನ ವಿಚಾರದ ಜನ ಹೀಗೆ ಮಾಡಲೂಬಹುದು! ಅವರವರ ಭಾವಕ್ಕೆ ಬಿಟ್ಟಿದ್ದು. ತಪ್ಪು ಎಂದ್ರೆ ದ್ರೌಪದಿಯ ಉದಾಹರಣೆ ಹೇಳಬಹುದು, ಸರಿ ಅಂದ್ರೆ ಸಮಾಜ ಒಪ್ಪಲ್ಲ ಹಾಗೂ ಇದು ಕಾರ್ಯಸಾಧುವಲ್ಲ.
(ಇನ್ನು ತಮಾಷೆಗೆ)ವಸುಧಾಳಿಗೆ ನನ್ನ ಪರಿಚಯಸದಿದ್ದದ್ದೇ ಒಳ್ಳೇದಾಯ್ತು, ಇಲ್ಲಂದ್ರೆ ಮೂರೂ ಜನರನ್ನು ಅಂತ ಎನಾದ್ರೂ ಹೇಳಿದ್ರೆ!!! ಅಬ್ಬಾ... :) :)
ಪ್ರಭು ಅವರೇ, ಕಥೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು!
ಎಸ್ಸೆಸ್ಕೆ, ನೀವು ಹೇಳುವುದು ಸಮಾಜದ ನಗ್ನ ಸತ್ಯಗಳಲ್ಲೊಂದು. ನಿಜ ಮುಖವಾಡಗಳನ್ನು ಧರಿಸಿ ಮೋಸಮಾಡುವುದಕ್ಕಿಂತ ನಿಮ್ಮ ಕಥೆಯಲ್ಲಿ ಬಂದ ನಿರ್ಧಾರ ಒಳ್ಳೆಯದೇ. ಆದರೆ ಇದಕ್ಕೆ ಸಮಾಜದ ಒಪ್ಪಿಗೆ ಅದಕ್ಕಿಂತ ಮುಖ್ಯ ನನ್ನ ಅನಿಸಿಕೆಯಂತೆ ಗಂಡಿನ ಹಮ್ಮು ಅಡ್ಡ ಬರಬಹುದು. ಪ್ರೀತಿ-ಪ್ರೇಮ ಎಂದು ಮೊದಲಿಗೆ ಒಪ್ಪುವ ಗಂಡು ನಂತರ ಇದೇ ಭಾವ ಮುಂದುವರೆಸುತ್ತಾನೆಯೇ ಎನ್ನುವುದೂ ಪ್ರಶ್ನಾರ್ಹ ಅಲ್ಲವೇ...? ನನ್ನ ಪ್ರತಿಕ್ರಿಯೆಗೆ ಸ್ಪಂದಿಸಿದಕ್ಕೆ ಧನ್ಯವಾದ...ಕಥೆಯ ಗುಣ ಅಥವಾ ಶೈಲಿಗೆ hats off...ಉಳಿದದ್ದು ವೈಚಾರಿಕ ತಾಕಲಾಟ ಅಷ್ಟೇ...
ತುಂಬಾ ಚಂದವಾಗಿ ಕಥೆಯನ್ನು ಹೆಣೆದಿದ್ದೀರಿ....
ಅದು ವಾಸ್ತವ ಸತ್ಯ...
ಅಭಿನಂದನೆಗಳು...
ನಿರೂಪಣೆ ಚೆನ್ನಾಗಿದೆ ಸರ್..
-ಧರಿತ್ರಿ
chennagide...
ಜಲನಯನ, ಪ್ರಕಾಶ್ ಹೆಗ್ಡೆ, ಧರಿತ್ರಿ, ಮನಸು, ಕಥೆ ಓದಿ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು!
ವಸುಧಾ = ಭೂಮಿ, ಆಕಾಶ್ = ಆಗಸ ಆದಿತ್ಯ = ಸೂರ್ಯ ಸೂಪರ್ ಆದರೆ ಅವರು ಜೀವನ ಪೂರ್ತಿ ಫ್ರೆಂಡ್ಸ್ ಆಗಿ ಇರಬಹುದಾಗಿತ್ತು ಒಂದೇ ಹುಡುಗಿನ ಇಬ್ಬರು ಮದುವೆ ಆಗೋದೋ ಅಸಾದ್ಯ ಯಾಕೆ ಅಂದರೆ ಇದು ಕಲಿಗಾಲ. ವಸುಂಧರನು ಯಾರನ್ನು ಮದುವೆ ಆಗದೆ ಆಕಾಶ್ ಮತ್ತೆ ಆದಿತ್ಯ ಕೂಡ ಯಾರನ್ನು ಮದುವೆ ಆಗದೆ ಇರಬಹುದಾಗಿತ್ತು ನನ್ ಪ್ರಕಾರ claimax ಎಲ್ಲೋ ಸ್ವಲ್ಪ ಬೇಜಾರು ಅನ್ನಿಸುತ್ತಿದೆ ಯಾಕ ಅಂದರೆ ಇಗಿನ ಕಾಲದ ಹುಡುಗಿರು ಯಾರು ವಸುಂಧರಾ ತರ ಇರಲ್ಲ any we ಸೂಪರ್ ಅಂಡ್ fantastic ಹೀಗೆ ಇನ್ನು ಹಲವು ಪ್ರೇಮ ಕತೆಗಳನ್ನು ಬರೆಯರಿ ನಮಗೋಸ್ಕರ
Post a Comment