Good News:-
"OUR NATIONAL ANTHEM (JANAGANAMANA)" has selected as
"WORLD'S BEST NATIONAL ANTHEM" by "UNESCO"
"PROUD TO BE AN INDIAN"
"TELL TO ALL OUR INDIAN"
ಅಲ್ಲವೇ ಹೆಮ್ಮೆಯ ವಿಷಯ! ರಾಷ್ಟ್ರ ಗೀತೆಯನ್ನು ರಚಿಸಿದ "ರವಿಂದ್ರನಾಥ್ ಠಾಗೋರ್" ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು!!!
ನಮ್ಮ ರಾಷ್ಟ್ರ ಗೀತೆ ಮತ್ತು ರಚನೆಕಾರರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ en.wikipedia.org/wiki/jana_gana_mana ಇಲ್ಲಿ ಭೇಟಿ ನೀಡಿ.
8 comments:
wav,...!
realy it is great...!
ಎದೆ ತಟ್ಟಿ ಹೇಳಿ.. "ನಾವು ಭಾರತೀಯರು".
Proud to be an Indian
ಹೆಮ್ಮೆ ಪಡಬಹುದೇನೊ, ಆದರೆ ಯಾಕೊ ಈ ಗೀತೆಯನ್ನು ಬ್ರಿಟಿಶ್ ರೂಲರನ್ನು ಹೊಗಳಿ ಬರೆದಿದ್ದರು ಅಂತ ವಿವಾದವಿದೆ(ನೀವು ಕೊಟ್ಟ ಲಿಂಕ್ wikipediaದಲ್ಲೂ ಬರೆದಿದ್ದಾರೆ), ಅದನ್ನು ಕೇಳಿದಾಗಿನಿಂದ ಯಾಕೊ ನಮ್ಮ ರಾಷ್ಟ್ರಗೀತೆ ಅಂತ ಹೇಳಿಕೊಳ್ಳಲು ಒಂಥರಾ ಬೇಜಾರು ಆಗುತ್ತದೆ(ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ, ನಿಮಗಿಷ್ಟವಾಗದಿದ್ದರೆ ಕ್ಷಮಿಸಿ)...
ಎಸ್ಸೆಸ್ಕೆಯವರೇ, ನಮ್ಮ ಹಿರಿಯರೆಲ್ಲಾ ಇದನ್ನು ನಮ್ಮ ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಿದ ಮೇಲೆ..ನಾವೂ ಮುಂದುವರೆಯೋಣ..ಅದಕ್ಕೆ ಸಂದ ಗೌರವ ನಮ್ಮ ಬೆಳೆಯುತ್ತಿರುವ ಅಸ್ತಿತ್ವದ ಮಹತ್ತಿಗೆ ಸಂದ ಗೌರವ. ಪ್ರಭು ಮನದ ಮಾತಿಗೆ ನನ್ನದೂ ಸ್ವಲ್ಪ ಕ್ಷಣ-ಸ್ತಬ್ದ ಚಿತ್ತಸ್ಥಿತಿ...ಇದರಲ್ಲಿ ಬೇರೆ ಬೇರೆ ಪ್ರದೇಶಗಳು, ನದಿ, ಮತ್ತು ಪರ್ವತಗಳ ಉಲ್ಲೇಖಬಿಟ್ಟು ಮತ್ತೇನಿದೆ ಹೇಳಿ..?? ಇದಕ್ಕೆ ಹೋಲಿಸಿದರೆ ನಮ್ಮ ಕುವೆಂಪುರವರ ಜಯಭಾರತಜನನಿಯ ತನುಜಾತೆ ನಾಡಿನ ಪೂರ್ಣ ಚಿತ್ರಣವನ್ನು ಮುಂದಿಡುತ್ತೆ ಅದೇ ಸಮಾನಾಂತರ ಶೈಲಿಯಾಗಿದ್ದರೆ .... ನನ್ನದೂ ವೈಯಕ್ತಿಕ ಅನ್ನಿಸಿಕೆ ಅಷ್ಟೆ...
ಪ್ರಕಾಶ್ ಹೆಗ್ಡೆ, ಶಿವಪ್ರಕಾಶ್, ಪ್ರಭು ಮತ್ತು ಜಲನಯನ, ಲೇಖನ ಓದಿ ಅಭಿಪ್ರಾಯ ತಿಳಿಸಿದ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು!
ಎಸ್ಸೆಸ್ಕೆಯವರೇ,
ಇದೊಂದು ಗಾಳಿಮಾತು ಅನ್ನೋ ವಿಚಾರ ಈಗಾಗಲೇ ನಿಮಗೆ ತಿಳಿದಿರಬಹುದು. ಯಾರೋ ಕಿಡಿಕೇಡಿಗಳು ಮಾಡಿದ ಕೆಲಸ.
ನಾನು ಈ ವಿಚಾರ ಓದಿದಾಗ ಕೆಲವು ಪ್ರಶ್ನೆಗಳು ಮನಸಿನಲ್ಲಿ ಮೂಡಿತ್ತು..
-ಇದರರ್ಥ ಬೇರೆ ದೇಶಗಳ ಗೀತೆ ಚೆನ್ನಾಗಿಲ್ಲ, ಅಲ್ಲಿಯ ಪ್ರದೇಶದ ಜನಕ್ಕೆ ದೇಶಾಭಿಮಾನ ಇಲ್ಲವಾ?
-ನನ್ನಮ್ಮ ಮಾತ್ರ ಒಳ್ಳೇವಳು ಅನ್ನೋ ಹಾಗಾಯ್ತು ಈ ಕಥೆ!!
ಅದೇನೇ ಇರಲಿ, ಈ ವಿಷಯ ನಿಜವಾಗಿದ್ದಿದ್ದರೆ ಹೆಮ್ಮೆ ಆಗ್ತಾಯಿತ್ತೇನೋ.
ರೂಪಶ್ರಿ ಅವರೇ,
ಮೊದಲಿಗೆ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ! ನಿಮ್ಮ ಪ್ರತಿಕ್ರಿಯೆಗೆ ಮತ್ತು ವಿಚಾರ ವಿನಿಮಯಕ್ಕೆ ಧನ್ಯವಾದಗಳು!
ನಾನೂ ಮೊದಲಿಗೆ ಈ ವಿಷಯವನ್ನು ಬ್ಲಾಗ್ನಲ್ಲಿ ಹಾಕುವ ಮೊದಲು ಹಲವು ಬಾರಿ ಯೋಚಿಸಿದ್ದೆ, ಇದು ನಿಜಾನಾ ಅಂತ!
ಆದರೆ ಇಂತಹ ವಿಚಾರದಲ್ಲಿ ಯಾರಾದರೂ ಹುಡುಗಾಟ ಆಡ್ತಾರಾ? ಅಂತ ಅನ್ನಿಸಿ ಹೆಮ್ಮೆಯಿಂದ ಈ ವಿಷಯವನ್ನು ಬ್ಲಾಗಿಸಿದ್ದೆ.
ಈಗ ಇದು ಗಾಳಿಮಾತು ಎಂಬುದು ನಿಮ್ಮಿಂದ ಸ್ಪಷ್ಟವಾಗಿ ಅದರಲ್ಲಿನ ವಿವರಗಳನ್ನು ಓದಿದಮೇಲೆ ಮನಸ್ಸಿಗೆ ತುಂಬಾ ಬೇಸರವಾಯಿತು.
ಈ ಜನಗಳೇ ಹೀಗೆ:- ಕುರಿಗಳು ಸಾರ್/ಮೇಡಂ ಕುರಿಗಳು?!?!
ಒಹ್! ವಿಚಾರ ಕೇಳಿ ತುಂಬಾ ಸಂತೋಷವಾಯಿತು. ನನಗಂತೂ ಹೆಮ್ಮೆಯೆನಿಸುತ್ತೆ....
ನಿಜಕ್ಕೂ "ನಾವು ಭಾರತೀಯರು".
Post a Comment