Saturday, July 4, 2009

ಹೆಣ್ಣು ಒಲಿದರೆ........!

ಒಬ್ಬ ಹಳ್ಳಿಯವನು, ಹೊಸದಾಗಿ ಮದುವೇ ಆಗಿರುತ್ತಾನೆ! ಮೂರು ದಿನಗಳು ಮಾವನ ಮನೆಯಲ್ಲಿ ಕಳೆದ ನಂತರ ಹೆಂಡತಿಯೊಂದಿಗೆ ತನ್ನ ಮನೆಗೆ ಹೊರಡಲು ಸಿದ್ದವಾಗಿರುತ್ತಾನೆ. ಹೊರಡುವ ಮುಂಚೆ ಮಾವ ಈ ಅಳಿಯನನ್ನು ಕರೆದು, ತನ್ನ ಮಗಳ ಬಗ್ಗೆ ಕೆಲವು ಲೋಕಾರೂಡಿಯ ಮಾತುಗಳನ್ನಾಡಿ ಕೊನೆಯಲ್ಲಿ ಒಂದು ಮಾತು ಹೇಳುತ್ತಾರೆ! ಅದೇನೆಂದರೆ, ನೋಡಿ ಅಳಿಯಂದ್ರೆ, ಹೆಣ್ಣು ಚಂಚಲೆ ಮತ್ತು ವಿಚಿತ್ರ ಸ್ವಭಾವದವಳಾಗಿರುತ್ತಾಳೆ, ಹೆಣ್ಣಿನ ಮನಸ್ಸು ಅರಿಯುವುದು ಅಷ್ಟು ಸುಲಭವಲ್ಲ. ಅದಕ್ಕೆ ಹೆಣ್ಣಿನ ಬಗ್ಗೆ ನಮ್ಮ ಹಿರಿಯರು ಒಂದು ಮಾತು ಹೇಳುತ್ತಿದ್ದರು "ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ" ಎಂದು!! ಈ ಮಾತನ್ನು ನಾನು ನಿಮ್ಮ ಕಿವಿಗೆ ಹಾಕಿದ್ದೇನೆ, ಈ ವಿಷಯವನ್ನು ಮನದಲ್ಲಿ ಇಟ್ಟುಕೊಂಡು, ನನ್ನ ಮಗಳ ಮನಸ್ಸನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಹೊಂದಿಕೊಂಡು ಅನ್ಯೋನ್ಯ ದಾಂಪತ್ಯ ನಡೆಸಿ. ಮುಂದಿನ ನಿಮ್ಮ ಜೀವನ ಶುಭಾಮಯವಾಗಿರಲಿ ಎಂದು ಹಾರೈಸುತ್ತಾ ಅಳಿಯ ಮತ್ತು ಮಗಳನ್ನು ಬೀಳ್ಕೊಡುತ್ತಾರೆ!


ಮದುವೆಯಾಗಿ, ಕೆಲವು ತಿಂಗಳು ಕಳೆಯಿತು. ಅಷ್ಟರಲ್ಲಿ ಒಂದು ದೊಡ್ಡ ಹಬ್ಬ ಬರುತ್ತಿತ್ತು. ಆ ಹಬ್ಬಕ್ಕೆ ಅಳಿಯ ಮತ್ತು ಮಗಳನ್ನು ಅಹ್ವಾನಿಸಿದ್ದೂ ಆಯಿತು. ಹಬ್ಬ ಹತ್ತಿರ ಬರುತ್ತಿದ್ದಂತೆ ಅಳಿಯಂದ್ರು ಹೊರಟರು ಮಾವನ ಮನೆಗೆ! ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಾವನಿಗೆ ಬಂಡಿ (ಎತ್ತಿನ ಗಾಡಿ) ಸದ್ದು ಕೇಳಿ ಸಂಭ್ರಮದಿಂದ, ಮನೆಯವರನ್ನೆಲ್ಲಾ ಕೂಗುತ್ತಾ ಅವರನ್ನು ಬರಮಾಡಿಕೊಳ್ಳಲು ಹೊರಗೆ ಬರುತ್ತಾರೆ. ಅಷ್ಟರಲ್ಲಿ ಗಾಡಿ ಇಳಿದು ಮನೆ ಮುಂದೆ ನಿಂತಿದ್ದ ಅಳಿಯನಿಗೆ ಕೈ ಕಾಲು ತೊಳೆಯಲು ನೀರು ಕೊಡುತ್ತಾ, ಮಾವ ತನ್ನ ಮಗಳ ಬಗ್ಗೆ ವಿಚಾರಿಸುತ್ತಾರೆ! ಎಲ್ಲಿ ಅಳಿಯಂದ್ರೆ ನನ್ನ ಮಗಳು? ನೀವು ಅವಳನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಬರಲಿಲ್ವಾ ಅಂತ ಕೇಳುತ್ತಾರೆ!!

ಅದಕ್ಕೆ ಅಳಿಯಂದ್ರು ಹೇಳುತ್ತಾರೆ, ಅಯ್ಯೋ ಅವಳು ನನ್ನ ಜೊತೆಗೆ ಹೊರಟಳು ಮಾವ. ಆದರೆ, ಮತ್ತೆ...... ಮತ್ತೆ......., ಆ ದಿನ ನೀವೇ ಹೇಳಿದ್ರಲ್ವ 'ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ' ಅಂತ! ಅದಕ್ಕೆ...... ಅವಳು ಅವಾಗವಾಗ ತುಂಬಾ ಮುನಿಸಿಕೊಳ್ಳುತ್ತಿದ್ದಳು ಮಾವ, ಆದ್ದರಿಂದ ಬರುವಾಗ ದಾರಿಯಲ್ಲಿ ಅವಳನ್ನು ಪಕ್ಕದ ಹಳ್ಳಿಯವನಿಗೆ 'ಮಾರಿ' ಬಿಟ್ಟು ಬಂದೆ!!!!! ಅಂತ !*!*?*!*! ಈ ಮಾತನ್ನು ಕೇಳಿದ ಮಾವನಿಗೆ ಬೆಸ್ತೋ ಬೇಸ್ತು!!!


ಮೊನ್ನೆ ಹೀಗೆ ನನ್ನ ಹಳೆಯ ಪುಸ್ತಕಗಳನ್ನು ಜಾಲಾಡುವಾಗ, ಅದರಲ್ಲಿ ನಾನು ಸಂಗ್ರಹಿಸಿದ್ದ ಈ ಪುಟ್ಟ ಲೇಖನ ದೊರೆಯಿತು. ಅದನ್ನು ನನ್ನ ಬ್ಲಾಗ್ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಈ ವಾರ ಅದನ್ನೇ ಬರೆದಿದ್ದೇನೆ.
ಪ್ರಿಯ ಸ್ನೇಹಿತರೆ, ಬಹುಷಃ ನಿಮಗೆಲ್ಲರಿಗೂ ಈ ಜೋಕು ಗೊತ್ತಿರಬಹುದು ಎಂದುಕೊಳ್ಳುತ್ತೇನೆ. ನಿಮ್ಮ ಅನಿಸಿಕೆ ತಿಳಿಸಿ.

20 comments:

Guruprasad said...

ಹಾ ಹಾ.. ಎಲ್ಲೊ ಕೇಳಿದ್ದ ನೆನಪು ಇತ್ತು,,, ಇನ್ನೊಮೆ ನೆನಪಿಸಿ,,, ನಗುವಂತೆ ಮಾಡಿದ್ದಕೆ ಧನ್ಯವಾದಗಳು...
ಹೌದು,, ಈ ಹೆಣ್ಣಿನ ಮನಸು ಯಾಕೆ ಹೀಗೆ,, ತುಂಬ ಚಂಚಲೆ.... ಎಲ್ಲದರಲ್ಲೂ ತುಂಬ extreem.....ಅಲ್ವ.. ನನ್ನ ಅನುಭವಕ್ಕೂ ಬಂದಿದೆ.....situation ಹ್ಯಾಂಡಲ್ ಮಾಡೋಕೆ ನಮಗೆ ಸ್ವಲ್ಪ ತಾಳ್ಮೆ ಇರಬೇಕು ಅಸ್ತೆ.... :-)

Prabhuraj Moogi said...

ಎಲ್ಲೊ ಕೇಳಿದ್ದು ನೆನಪು, ಮತ್ತೆ ನೆನಸಿ ನಗುವಂತಾಯಿತು.

Ittigecement said...

ಹ್ಹಾ....ಹ್ಹಾ...!

ಮುನಿದರೆ ಮಾರಿ....!

ಸಿಕ್ಕಾಪಟ್ಟೆ ನಗು ಬಂತು...!!

ನಗಿಸಿದ್ದಕ್ಕೆ ಧನ್ಯವಾದಗಳು

ರಾಜೀವ said...

ಒಳ್ಳೆ ಸಲಹೆ ಕೊಟ್ಟಿದ್ದೀರ ಎಸ್.ಎಸ್.ಕೆ ಅವರೆ. ಮದುವೆ ಆದ್ಮೇಲೆ ನಿಮ್ಮ ಈ ಸಲಹೆ ಉಪಯೂಗಿಸ್ತಿನಿ. ;)

SSK said...

ಗುರು, ಪ್ರಭು, ಪ್ರಕಾಶ್ ಮತ್ತು ರಾಜೀವ, ನೀವೆಲ್ಲರೂ ಲೇಖನವನ್ನು ಓದಿ ಆನಂದಿಸಿ ನಕ್ಕು ಹಗುರಾಗಿದ್ದಕ್ಕೆ ತುಂಬಾ ಥ್ಯಾಂಕ್ಸ್!
ದಯವಿಟ್ಟು ನೀವ್ಯಾರೂ ನಿಮ್ಮ ನಿಮ್ಮ ಹೆಂಡ್ತೀರ ಮೇಲೆ ಇಂತಾ ಪ್ರಯೋಗ ಖಂಡಿತ ಮಾಡಬೇಡಿ ಪ್ಲೀಸ್!!
(ತಮಾಷೆಗೆ ಹೇಳಿದೆ) ಹ ಹ್ಹ ಹಾ ಹ್ಹಾ!

ಜಲನಯನ said...

ಎಂಥಾ ಜೋಕುರೀ..ಎಸ್ಸೆಸ್ಕೆಯವರೇ,?? ಇದೇ ಧಾಟಿಯ ಜೋಕನ್ನ ಕೇಳಿದ್ದೆ ..ಆದರೆ...ಮುನಿದರೆ -ಮಾರಿ.. ನಿಮ್ಮಿಂದ...ಕೇಳ್ದೆ...ಒಳ್ಳೆ ಪೆಕರ...ಅಷ್ಟು ದಿನ ಕಾಯಬೇಕಾಯ್ತ...-ಮಾರೋಕೆ...??? ಹಹಹ,
ಇನ್ನೊಂದು ಗೊತ್ತೆ...ಆ ಮದುಮಗನಿಗೆ ಅವನ ಮಾವ ಹಿತವಚನ ಹೇಳುವಾಗ ಅವನ ಸ್ನೇಹಿತ ಬುಡೇನ್ ಸಾಬ್ ಕೇಳಿಸ್ಕೊಂಡ......ಅವನಿಗೂ ಮದುವೆ ಆಯ್ತು....ಸುಮಾರು ಅದೇ ಸಮಯಕ್ಕೆ ರಂಜಾನ್ ಹಬ್ಬಾನೂ ಬಂತು....ಬುಡೇನ್ ಮಾವನ ಮನೆಗೆ ಬರುತ್ತಿರುವಂತೆ...ಬೈಕಿನಿಂದ ಕೆಳಗಿಳಿದ ರೇಶ್ಮಾ...ಅಳುತ್ತಾ ಹೋಗಿ ಅವಳಪ್ಪನ್ನ ಅಪ್ಪಿಕೊಂಡು ಒಂದೇ ಸಮ ಅಳತೊಡಗಿದಳು...ಯಾಕೇ ಬೇಟಿ..ಅಂತ ಅವಳ ಅಬ್ಬ (ಅಬ್ಬಬ್ಬ..!! ಅಲ್ಲ...ಅಪ್ಪನನ್ನ ರೇಶ್ಮಾ ಕರೆಯುತ್ತಿದ್ದುದು ಹಾಗೆ..) ಕೇಳಿದ್ದಕ್ಕೆ....ಅಬ್ಬ...ನಾನು ಯಾವ್ದಾದರೂ ವಿಷಯಕ್ಕೆ ಗುಸ್ಸಾ ಮಾಡ್ಕೊಂಡ್ರೆ..ದನಕ್ಕೆ ಬಡಿಯೋ ಹಾಗೆ ಬಡೀತಾರೆ...ಕ್ಯೋಂ ಜೀ...ಅಂದ್ರೆ...ತೇರೆ ಅಬ್ಬಕೊ ಪೂಛೊ...ಅಂತಾರೆ.. ಎನ್ನುತ್ತಾಳೆ.
ಕೋಪಗೊಂಡ ಮಾವ ಬುಡೇನ್ನ ಯಾಕಪ್ಪ ಹೊಡೀತೀಯ..? ಅಂದದಕ್ಕೆ...
ನನ್ನ ಸ್ನೇಹಿತನ ಮಾವ ತನ್ನ ಮಗಳನ್ನು ಮದುವೆ ಮಾಡಿ ಬೀಳ್ಕೊಡಬೇಕಾದರೆ...~ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ...ಅಂತ ಹಿತವಚನ ಹೇಳಿದ್ದರಲ್ಲಾ ..
ಹೌದು ಸರಿಯಾಗೆ ಹೇಳಿದ್ದಾರೆ ಅಂದ ಬುಡೇನ್ ಮಾವ...
ಹಂಗಾದರೆ ನಾನು ಮಾಡಿದ್ದೂ ಸರಿ....ಅಂದ.
ಹ್ಯಾಗಪ್ಪ ಅಂದದಕ್ಕೆ....ಮುನಿದರೆ...ಮಾರೋ ಅಂತ ತಾನೆ ಹೇಳಿದ್ದು...ಮಾರೋ ಅಂದ್ರೆ..ಹೊಡಿ ಅಂತ ತಾನೆ....??? ಅಂದುಬಿಡೋದೇ..???!!!

SSK said...

ಜಲನಯನ ಅವರೇ,
ಈ ಕಥೆಗಿದ್ದ ಉಪಕಥೆಯನ್ನು ಹೇಳಿ ನಮ್ಮನ್ನು ನಗಿಸಿದ್ದೀರ! ಈ ಕಥೆ ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಮತ್ತು ನಗಿಸಿದ್ದಕ್ಕೆ ಧನ್ಯವಾದಗಳು!!

ಧರಿತ್ರಿ said...

ಹೆಹೆಹೆ ಮಜಾ ಇದೆ...ಇನ್ನು ಅವಿತಿರೋದು ಇದ್ರೆ ಹೆಕ್ಕೆ ಬ್ಲಾಗಿಗೆ ಹಾಕ್ಬಿಡಿ. ನಗೋಕೆ ನಾವಿದ್ದೇವೆ.
-ಧರಿತ್ರಿ

ಜಲನಯನ said...

ಎಸ್ಸೆಸ್ಕೇ, ಧರ್ರಿತ್ರಿ...ನೀವಿಬ್ಬರೂ ನನ್ನ ಬ್ಲಾಗಿನ -ಹಾಡು ವಿಥ್ ಮ್ಯೂಜಿಕ್- ಪೋಸ್ಟ್ ನೋಡಿಲ್ಲ previous posts ನಲ್ಲಿ ಹೋಗಿ ನೋಡಿ...ನಗಬೇಕೆನಿಸಿದರೆ ಜೋರಾಗಿ ನಕ್ಕುಬಿಡಿ...ಅದನ್ನ ಹತ್ತಿಕ್ಕಬೇಡಿ...ಓಕೆ...??? ಆಮೇಲೆ ನನಗೆ ನನ್ನ ಬ್ಲಾಗನಲ್ಲಿ ತಿಳಿಸಿ.....

SSK said...

ಧರಿತ್ರಿ ಅವರೇ,
ಹಾಗೆ ಆಗಲಿ, ಸಮಯ ಸಿಕ್ಕಾಗ ಒಂದೊಂದೇ ನಗೆ ಬುಗ್ಗೆ ಗಳನ್ನೂ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ! ಹೀಗೆ ಭೇಟಿ ನೀಡುತ್ತಾ ಇರಿ...........ಧನ್ಯವಾದಗಳು !

sunaath said...

ಜೋಕು ಚೆನ್ನಾಗಿದೆ. ಓದಿ ಖುಶಿ ಪಟ್ಟೆ.

ಜಲನಯನ said...

ಎಸ್ಸೆಸ್ಕೆ, ಧರಿತ್ರಿ, ನನ್ನ ಈ ಬ್ಲಾಗ್ ಪೋಸ್ಟ್ ನೋಡೊಕೆ ಹೇಳಿದ್ದೆ, ನಿಮ್ಮ ಪ್ರತಿಕ್ರಿಯೆಗೂ ...ಆದ್ರೆ..ನೀವು ನೋಡಿಲ್ಲ...ಒಂದು ಒಳ್ಲೆ ಜೋಕನ್ನ ಮಿಸ್ ಮಾಡ್ಕೊಬೇಡಿ...
http://jalanayana.blogspot.com/2009/06/blog-post.html ಕ್ಲಿಕ್ ಮಾಡಿ ಬೇಗ....

Santhosh Rao said...

Nice one.. Chennagide

SSK said...

ಸುನಾಥ್ ಅವರಿಗೆ ಮತ್ತು ಸಂತೋಷ್ ಚಿದಂಬರ್ ಅವರಿಗೆ,
ನಿಮಗೆ ನನ್ನ ಬ್ಲಾಗಿಗೆ ಆದರದ ಸ್ವಾಗತ! ನೀವು ಬಂದು ಲೇಖನ ಓದಿ ಖುಷಿ ಪಟ್ಟಿದ್ದಕ್ಕೆ ಸಂತೋಷವಾಗುತ್ತಿದೆ, ಧನ್ಯವಾದಗಳು!! ಹೀಗೆ ಭೇಟಿ ನೀಡುತ್ತಿರಿ ಮತ್ತು ಪ್ರೋತ್ಸಾಹಿಸುತ್ತಿರಿ!!!

Dileep Hegde said...

ಹಹಹ... ಜೋಕ್ ಬೊಂಬಾಟಾಗಿದೆ...

SSK said...

Welcome to my blog dileep, thanks a lot keep comming.

ಜಿ.ಎಸ್.ಬಿ. ಅಗ್ನಿಹೋತ್ರಿ said...

chennagide. old is gold...

SSK said...

Thanks Agnihotri, keep comming!

ಜಲನಯನ said...

ಇದೇನು...? ನನ್ನ ಬ್ಲಾಗ್ ಬಗ್ಗೆ ಬರೆದ್ರಿ..ಇಲ್ಲಿ ನಿಮ್ಮ ಅಂಕಣದಲ್ಲಿ ಹೊಸತು...ಇನ್ನೂ ...???!!!

shivu.k said...

SSK ಸರ್,

ಲೇಖನ ಓದಿಸಿಕೊಂಡು ಹೋಗಿ ಕೊನೆಯಲ್ಲಿ ಒಳ್ಳೇ ಜೋಕಿನಲ್ಲಿ ಅಂತ್ಯವಾಗುತ್ತೆ....ನೀವು ಪದಪ್ರಯೋಗವನ್ನು ಮಾಡುವುದರಲ್ಲಿ ಪರಿಣಿತರು ಅನ್ನಿಸುತ್ತೆ...

ಧನ್ಯವಾದಗಳು.