Sunday, August 22, 2010

ಸಂಭ್ರಮದ ಸುದಿನಾ......!!..!!

ನೀನು ಬಂದ ಮೇಲೆ ತಾನೇ ಇಷ್ಟು ಚೆನ್ನ ಈ ಬಾಳು,

ನೀನು ತಾನೇ ಹೇಳಿಕೊಟ್ಟೆ ಪ್ರೀತಿಸಲು !

ಕಂಗಳು ಹಿಂದೆಂದೂ ಕಾಣದ ಹೊಸದೊಂದು

ಲೋಕಕೆ ನನ್ನನ್ನು ನೀ ಸೆಳೆದೆ !!

ಲಾ ಲ ಲ ಲಾ ಲಾ ಲ........ಲಾ ಲಾ ಲ ಲಾ ಲಾ ಲ ......ಲಾ ಲಾ ಲಾ !





ಸ್ನೇಹಿತರೆ, ಇದೇನಿದು ಲೇಖನದ ತಲೆ ಬರಹ ಏನೋ ಇದೆ, ಹಾಡೆಲ್ಲ ಇದೆ ಇದೇನಿದೂ ಅಂದುಕೊಂಡಿರಾ?

ಗಾಬರಿಯಾಗಬೇಡಿ, ಈ ಹಾಡು ಸಿನೆಮಾದಲ್ಲಿ ಪ್ರಿಯಕರ ಪ್ರೇಯಸಿಗೆ ಹಾಡಿದ್ದ ಹಾಡು ಇದು ಆಲ್ವಾ?

ಆದರೆ ಈ ಹಾಡನ್ನು ನಾನು ಬ್ಲಾಗ್ ಲೋಕಕ್ಕೆ ಅಂತ ಉಪಯೋಗಿಸಿದ್ದು! ಈ ಹಾಡು ಬ್ಲಾಗ್ ಲೋಕಕ್ಕೂ ಅನ್ವಯಿಸುತ್ತದೆ ಅಲ್ಲವೇ?! ಇರಲಿ ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ, ಅದೇನೆಂದರೆ ಆಗಸ್ಟ್ ೨೨ ಬ್ಲಾಗ್ ಲೋಕದ ಜನರಿಗೆ ಸುದಿನ, ಕಾರಣ ಆ ದಿನದ ಬ್ಲಾಗಿಗರ ಕೂಟ! ಅದಕ್ಕೂ ಮೊದಲು ಶಿವೂ ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆ ಸಮಾರಂಭ! ಇದು ಸುಮಾರು ಜನರಿಗೆ (ಬ್ಲಾಗಿಗರಿಗೆ) ಗೊತ್ತಿರುವ ವಿಷಯವೇ ಸರಿ!


ಆ ದಿನ ಅಂದರೆ ಆಗಸ್ಟ್ ೨೨, ೨೦೧೦ ಬೆಳಗ್ಗೆ ಸುಮಾರು ೧೧ ಗಂಟೆಗೆ ಸಮಾರಂಭ ಕಾರ್ಯಕ್ರಮ ಶುರುವಾಯಿತು.



ಮೊದಲಿಗೆ ಪ್ರವೀಣ್ (ಮನದಾಳದ ಮಾತು) ಅವರಿಂದ ಕಾರ್ಯಕ್ರಮದ ವಿವರಣೆ, ನಂತರ ಪ್ರಾರ್ಥನೆ ಮತ್ತು ಅಥಿತಿಗಳೊಂದಿಗೆ ದೀಪ ಬೆಳಗುವ ಕಾರ್ಯಕ್ರಮ ಆನಂತರ ಶಿವೂ ಅವರ "ಗುಬ್ಬಿ ಎಂಜಲು" ಮತ್ತು ಅಜಾದ್ ಅವರ "ಜಲನಯನ" ಪುಸ್ತಕಗಳ ಲೋಕಾರ್ಪಣೆ ಹೀಗೆ ಪ್ರಾರಂಭವಾಯಿತು!
ಜೊತೆಗೆ ಭಾಷಣ ಶುರುವಾಯಿತು. ಮೊದಲು ಮಾತನಾಡಿದವರು ಶಿವೂ, ನನಗೆ ವೇದಿಕೆಯ ಮೇಲೆ ನಿಂತು ಮಾತನಾಡಲು ಬರುವುದಿಲ್ಲ, ನನ್ನ ಮೊದಲ ಪುಸ್ತಕ 'ವೆಂಡರ್ ಕಣ್ಣು' ಪುಸ್ತಕದ ಬಿಡುಗಡೆಯ ಸಮಾರಂಭದಲ್ಲಿ ನಾನು ಭಾಷಣ ಮಾಡುವುದರಿಂದ ತಪ್ಪಿಸಿಕೊಂಡಿದ್ದೆ, ಆದರೆ ಈಗ ಸಿಕ್ಕಿಹಾಕಿಕೊಂಡಿದ್ದೇನೆ, ನನ್ನ ಮಾತನ್ನು ನನ್ನ ಲೇಖನ ಮತ್ತು ಛಾಯ ಚಿತ್ರಗಳಂತೆ ಸಹಿಸಿಕೊಳ್ಳಿ, ನಾನು ಹೀಗೆ ಮಾತನಾಡುತ್ತಿರುವುದು ಮೊದಲನೇ ಸಲ ಆದ್ದರಿಂದ ನನ್ನನ್ನು ಸಹಿಸಿಕೊಳ್ಳಿ ಎಂದು ಹೀಗೆ ಏನೇನೋ ಹೇಳುತ್ತಲೇ ಅಧ್ಬುತವಾಗಿ ಭಾಷಣ ಮಾಡಿ, ತಮ್ಮ ಮಾತಿನಿಂದ ಎಲ್ಲರನ್ನು ಕಟ್ಟಿಹಾಕಿದರು!


ನಂತರ ಮಾತನಾಡಿದವರು ಡುಂಡಿರಾಜ್ ಅವರು, ಎಂದಿನಂತೆ ತಮ್ಮ ಹಾಸ್ಯ ಶೈಲಿಯಲ್ಲೇ (ನಾನು ನೇರವಾಗಿ ಅವರನ್ನು ನೋಡಿ ಭಾಷಣ ಕೇಳಿದ್ದು ಇದೆ ಮೊದಲು. ಆದರೆ ಟೀವಿಯಲ್ಲಿ ನೋಡಿ ಮತ್ತು ಅವರಿವರ ಬಾಯಿಂದ ಕೇಳಿ ತಿಳಿದಿದ್ದರಿಂದ ಎಂದಿನಂತೆ ಎನ್ನುವ ಪದ ಉಪಯೋಗಿಸಿದೆ) ಸೊಗಸಾಗಿ ಭಾಷಣ ಮಾಡಿ ಎಲ್ಲರನ್ನು ನಗಿಸಿದರು! ನಂತರ ಶ್ರೀ ಹಾಲ್ದೊಡ್ಡೇರಿ ಸುಧೀಂಧ್ರ ಅವರು ಮಾತನಾಡಿದರು!
ಆ ನಂತರದಲ್ಲಿ ಡಾ. ಶೇಷಾ ಶಾಸ್ತ್ರಿ ಅವರ ಭಾಷಣವಿತ್ತು!! ಕೊನೆಯಲ್ಲಿ ಮಾತನಾಡಿದವರೇ ಅಜಾದ್! ಇವರ ಭಾಷಣ ಬಹಳ ಕೆಟ್ಟದಾಗಿತ್ತು (ಅಯ್ಯಯ್ಯೋ ತಪ್ಪು, ತಪ್ಪು ಕ್ಷಮಿಸಿ. ರಾಮ ರಾಮ, ಇದೇನಾಗಿಹೋಯಿತು! ವ್ಯಾಕರಣ ತಪ್ಪಿಹೋಯಿತು.)(ಅಜಾದ್ ಸಾರ್, ಕ್ಷಮಿಸಿ ತಪ್ಪು ತಿಳಿದು ಕೊಳ್ಳಬೇಡಿ ಸುಮ್ಮನೆ ತಮಾಷೆಗಾಗಿ ಈ ತುಂಟಾಟ ಅಷ್ಟೇ., ಅನ್ಯತಾ ಭಾವಿಸಬೇಡಿ ಪ್ಲೀಸ್!) ಅಲ್ಲಲ್ಲ ಕಟ್ ಕಟ್ ಆಗುತಿತ್ತು ಪಾಪ ಅವರಿಗೆ ಒಂದೇ ಸಮನೆ ಮಾತನಾಡಲು ಅವಕಾಶ ಸಿಗಲಿಲ್ಲ, ಆದರೂ ಅವರ ಹಸನ್ಮುಖದ, ಏಕತಾನತೆಯ ಮಾತುಗಳು ಮತ್ತು ಭಾಷಣ ಶೈಲಿ ಸುಂದರವಾಗಿತ್ತು !!!
ಈ ಕಾರ್ಯಕ್ರಮಗಳ ಚಂದದ ನಿರೂಪಣೆ ಮತ್ತು ನಿರ್ವಹಣೆ ಶ್ರೀಮತಿ ಸುಗುಣ ಮಹೇಶ್ (ಮೃದುಮನಸು) ಅವರದು.




ಪುಸ್ತಕಗಳ ಬಗೆಗಿನ ಮಾತುಕತೆ, ವಿಚಾರ ವಿಮರ್ಶೆ ಭಾಷಣ ಇವುಗಳ ನಂತರ ಅಥಿತಿಗಳಿಗೆ ಸನ್ಮಾನ ಸಮಾರಂಭ ಕೈಗೊಳ್ಳಲಾಗಿತ್ತು!!


ಒಟ್ಟಾರೆ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು !! ಈ ಸಮಾರಂಭ ಮುಗಿದು, ಸ್ವಲ್ಪ ಹೊತ್ತಿನ ವಿರಾಮದ ನಂತರ ಬ್ಲಾಗಿಗರ ಕೂಟ ಶುರುವಾಯಿತು.
ಈ ವಿರಾಮದ ಸಮಯದಲ್ಲೇ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡರು.

ಬ್ಲಾಗಿಗರ ಕೂಟ ಶುರುವಾಯಿತು. ಮೊದಲಿಗೆ ಹಾಡು, ಮಾತು ನಿರೂಪಣೆ ಹೀಗೆ ಸಾಗುತ್ತಾ, ಹರಟೆ, ಚೇಷ್ಟೆ, ಉಡುಗೊರೆ ಹಂಚುವ ಕಾರ್ಯಕ್ರಮ ಹೀಗೆ ಮುಂದುವರೆಯಿತು.
ಪ್ರಾರಂಭದಲ್ಲಿ ಹಲವರಿಗೆ ಒಬ್ಬರಿಗೊಬ್ಬರ ಪರಿಚಯವಿಲ್ಲದೆ ಮಿಕ - ಬಕ ಗಳಂತೆ ಒಬ್ಬರನ್ನೊಬ್ಬರು ಸುಮ್ಮನೆ ನೋಡುತ್ತಿದ್ದರು / ನೋಡಿಕೊಳ್ಳುತ್ತಿದ್ದರು! :) :)
ಅದೇ ಕೊನೆಯಲ್ಲಿ ಒಬ್ಬರಲ್ಲೊಬ್ಬರು ಎಷ್ಟು ಬೆರೆತು ಹೋದರೆಂದರೆ, ಎಲ್ಲರೂ ಎಷ್ಟೋ ವರ್ಷಗಳಿಂದ ಪರಿಚಯದಿಂದ ಪಳಗಿದಂತಹ ವಾತಾವರಣ ಸೃಷ್ಟಿಯಾಗಿತ್ತು !!!
ಅಲ್ಲಿ ಅನುಭವಿಸಿದ ರಸಕ್ಷಣಗಳನ್ನು ಎಲ್ಲವೂ ಮಾತಿನಲ್ಲಿ ವಿವರಿಸಲಾಗುವುದಿಲ್ಲ. ಅಲ್ಲಿದ್ದು ಅದನ್ನೆಲ್ಲ ಅನುಭವಿಸಿದವರಿಗೆ ಗೊತ್ತು ಅದರ ಸ್ವಾದ !!
ಫೋಟೋಗಳಲ್ಲಿ ತೋರಿಸೋಣವೆಂದರೆ ನಾನು ಯಾವ ಫೋಟೋನೂ ಅಲ್ಲಿ ತೆಗೆಯಲಿಲ್ಲ ಯಾಕೆಂದರೆ ನಮ್ಮ ಶಿವೂ (ಛಾಯ ಕನ್ನಡಿ) ಅವರು ಇರುವಾಗ ನಮಗೇಕೆ ಆ ಚಿಂತೆ ಅಲ್ಲವೇ ?!
ನೀವು ಫೋಟೋಗಳನ್ನು ಶಿವೂ (ಛಾಯ ಕನ್ನಡಿ) ಮತ್ತು ಪ್ರಕಾಶ್ ಹೆಗ್ಡೆ (ಇಟ್ಟಿಗೆ ಸಿಮೆಂಟು ) ಇವರ ಬ್ಲಾಗ್ನಲ್ಲಿ ನೋಡಬಹುದು (ಕೆಲವರು ಆಗಲೇ ನೋಡಿರಲೂ ಬಹುದು ಅಲ್ಲವೇ)

ಮತ್ತೊಮ್ಮೆ ಬ್ಲಾಗಿಗರ ಕೂಟದಲ್ಲಿ ಇನ್ನೂ ಹೆಚ್ಚೆಚ್ಚು ಜನ ಸೇರೋಣ ಎಂದು ಆಶಿಸುತ್ತಾ ........!

5 comments:

V.R.BHAT said...

chitragalu avara blaaginalli chjennaagi moodive ! dhanyavaada

ಶಿವಪ್ರಕಾಶ್ said...

Neevu karyakramakke bandu namma jote kalediddakke tumba kushi aytu :)
Nimagoo kooda dhanyavaadagalu :)

ಸವಿಗನಸು said...

ಚೆನ್ನಾಗಿ ನಿರೂಪಿಸಿದ್ದೀರ....
ನಿಮ್ಮ ಪರಿಚಯವಾದದ್ದು ಸಂತೋಷ.....

shivu.k said...

ಶೋಭ ಮೇಡಮ್’
ನಾನು ಗಡಿಬಿಡಿಯಲ್ಲಿ ನಿಮ್ಮ ಲೇಖನವನ್ನು ಗಮನಿಸಲೇ ಇಲ್ಲ. ತುಂಬಾ ಚೆನ್ನಾಗಿ ನಮ್ಮ ಕಾರ್ಯಕ್ರಮದ ಬಗ್ಗೆ ಬರೆದಿದ್ದೀರಿ. ಮತ್ತೆ ನಾನು ಕ್ಯಾಮೆರಾ ಹಿಡಿದಿಲ್ಲವೆನ್ನುವುದು ನಿಮಗೆ ಗೊತ್ತಾದ ವಿಚಾರ. ಆದ್ರೂ ಇನ್ನಿತರರಿಂದ ಫೋಟೊ ತೆಗೆದು ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಬಾರಿ ಇನ್ನೂ ಬ್ಲಾಗಿಗರು ಸೇರೋಣವೆಂದು ಆಶಿಸುತ್ತಾ...

ಧನ್ಯವಾದಗಳು.

ಮನದಾಳದಿಂದ............ said...

ಶೊಭಾ ಅವರೆ,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ,
ನಾವೆಲ್ಲಾ ಸೇರಿದ ದಿನವನ್ನು ಮರೆಯಲು ಎಂದಿಗೂ ಮರೆಯಲಾಗದು.....ನಮ್ಮೆಲ್ಲರ ಒಡನಾಟದ ಕ್ಷಣಗಳು ಸದಾ ನೆನಪಾಗುತ್ತಲೇ ಇರುತ್ತವೆ,