ಆಷಾಡ ಕಳೆದು ಶ್ರಾವಣ ಮಾಸ ಬಂದಿತು! ಇನ್ನೇನು ಮದುವೆ ಕಾಲ, ಸಂಭ್ರಮ ಮತ್ತು ಸಡಗರ, ಜೊತೆಗೆ ಸಾಲಾಗಿ ಹಬ್ಬಗಳು ಬೇರೆ ಬರುತ್ತವೆ. ಯಾರ ಮದುವೆ ಇರಬಹುದಪ್ಪಾ, ಆಹ್ವಾನ ಪತ್ರಿಕೆ ಕಳಿಸುತ್ತಿದ್ದಾರೆ ಅಂದುಕೊಂಡಿರಾ? ಖಂಡಿತ ಮದುವೆ ನನ್ನದಂತೂ ಅಲ್ಲ!!! ಇನ್ಯಾರದು ಅಂತ ತಿಳಿದು ಕೊಳ್ಳುವ ತವಕಾನಾ? ಯಾಕಷ್ಟು ಅವಸರ ನಿಧಾನವಾಗಿ, ನೆಮ್ಮದಿಯಾಗಿ ಲಗ್ನಪತ್ರಿಕೆ ಓದಿ ಮತ್ತು ನೀವೆಲ್ಲರೂ ಈ ಸಂತೋಷ ಸಮಾರಂಭದಲ್ಲಿ ಭಾಗಿಯಾಗಿ.
ಅಂದ ಹಾಗೆ ಸುಮ್ಮನೆ ವಧು ವರರ ಹೆಸರು ಮತ್ತು ಮದುವೆ ಸ್ಥಳ ಮಾತ್ರ ಓದಿ ಸುಮ್ಮನಾಗಬೇಡಿ! ಒಂದು ಅಕ್ಷರವೂ ಬಿಡದೆ ಪೂರ್ತಿ ಓದಿಬಿಡಿ ಆಗ ನಿಮಗೆ ಅನಿಸಿದ್ದು ನನಗೆ ತಿಳಿಸಿ .
ಯಾವುದೇ ಸಮಾರಂಭವಿರಲಿ ಅಲ್ಲಿ ಸಿಹಿ ತಿನಿಸು ಇಲ್ಲದಿದ್ದರೆ ಹೇಗೆ? ಅದು ಅಪೂರ್ಣ ಆಗುವುದಿಲ್ಲವೇ?
ಹೌದು, ಯಾವುದೇ ಆಚರಣೆ ಇರಲಿ ಅಲ್ಲಿ ಸಿಹಿ ತಿಂಡಿ ಇರಲೇ ಬೇಕು. ಆದರೆ ಈ ಸಿಹಿಗಳೇ ಮದುವೆ ಸಂಭ್ರಮ ನಡೆಸಿಕೊಂಡರೆ ಹೇಗಿರುತ್ತೆ......?!
ಮುಂದೆ ಓದಿ......
ಶುಭ ವಿವಾಹ
ಶ್ರೀ ಕೊಬ್ಬರಿ ಮಿಠಾಯಿ ಸ್ವಾಮಿ ಪ್ರಸನ್ನ!!!
ಸಕ್ಕರೆ ಜಿಲ್ಲೆಯ, ಗೋಡಂಬಿ ತಾಲೂಕು, ದ್ರಾಕ್ಷಿ ಹೋಬಳಿ, ಕಡ್ಲೆ ಹಿಟ್ಟು ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಬೂಂದಿ ರಾವ್
ಮತ್ತು
ಮೈದಾ ಹಿಟ್ಟು ಜಿಲ್ಲೆಯ, ಬಾದಾಮಿ ತಾಲೂಕು, ಕ್ಷೀರ ಹೋಬಳಿ, ರವೆ ಗ್ರಾಮದಲ್ಲಿ ವಾಸವಾಗಿರುವ
ಶ್ರೀಮತಿ ಮತ್ತು ಶ್ರೀ ಚಿರೋಟಿ ರಾವ್
ಸ್ವಸ್ತಿಶ್ರೀ ಕೇಸರಿ ಬಾತ್ ನಾಮ ಸಂವತ್ಸರ ದಿನಾಂಕ 46 / 83 / 2896 ರಂದು
ಮಧ್ಯರಾತ್ರಿ 33 ಘಂಟೆ 30 ನಿಮಿಷದಲ್ಲಿ "ಕ್ಯಾರೆಟ್ ಹಲ್ವ ಲಗ್ನದಲ್ಲಿ ನಡೆಯುವ "
ಚಿ ಸೌ ಜಿಲೇಬಿ ದೇವಿ
(ಶ್ರೀಮತಿ ಶ್ರೀ ಬೂಂದಿ ರಾವ್ ಅವರ ಜ್ಯೇಷ್ಠ ಪುತ್ರಿ)
ಮತ್ತು
ಚಿ ರಾ ಜಾಮೂನ್ ರಾವ್
(ಶ್ರೀಮತಿ ಶ್ರೀ ಚಿರೋಟಿ ರಾವ್ ಅವರ ಜ್ಯೇಷ್ಠ ಪುತ್ರ)
ಇವರ ವಿವಾಹ ಮಹೋತ್ಸವವನ್ನು, ಮೈಸೂರ್ ಪಾಕ ನಗರದಲ್ಲಿ ಇರುವ ಲಾಡು ಬಡಾವಣೆಯ ಧೂದ್ ಪೇಢ ಛತ್ರದಲ್ಲಿ ನಡೆಯುವಂತೆ, ಬಾಧೂಷರವರು ಮತ್ತು ಚಂಪಾಕಲಿಯವರು ಜೊತೆಗೆ ಇನ್ನೂ ಅನೇಕ ಸಿಹಿಗಳು ನಿಶ್ಚಯಿಸಿರುವುದರಿಂದ, ತಾವುಗಳು ತಮ್ಮ ಪರಿವಾರ ಸಮೇತ ಮದುವೇ ಛತ್ರಕ್ಕೆ ಬಂದು ಊಟಮಾಡಿ ಕೈ ತೊಳೆದುಕೊಂಡು, ವಧು ವರರನ್ನು ಆಶೀರ್ವದಿಸಬೇಕೆಂದು ಕೋರುವವರು, ಶ್ರೀ ಬೂಂದಿ ರಾವ್ ಮತ್ತು ಶ್ರೀ ಚಿರೋಟಿ ರಾವ್
ತಮ್ಮ ಸುಖ ಆಗಮನವನ್ನು ಬಯಸುವವರು:
ಬರ್ಫಿ, ಹಾಲುಖೋವ ಮತ್ತು ಮುಂತಾದ ಸಿಹಿ ಮಿತ್ರರು.......!!!!!
ಮುಖ್ಯ ಸೂಚನೆ:ತಮ್ಮ ಉಡುಗೊರೆಗಳನ್ನು ಪಾಯಸ ಮತ್ತು ಒಬ್ಬಟ್ಟು ಇವರುಗಳ ಕೈಗೆ ಕೊಡಬೇಕಾಗಿ, ತುಪ್ಪದ ವಿನಂತಿ!
ವಿವರಗಳಿಗೆ ಇಲ್ಲಿ ಸಂಪರ್ಕಿಸಿ :
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!
25 comments:
ತುಂಬಾ ಚೆನ್ನಾಗಿ ಇದೆ ಓದುತ್ತಿದರೆ ಬಾಯಿ ಯಲ್ಲಿ ನೀರು ಬರ್ತಾ ಇದೆ
ಹಾ, ಇದು ಸ್ವಲ್ಪ ಹಳೆದು ಅಂತ ಕಾಣುತ್ತೆ... ಇದನ್ನು ಮೊದಲೇ ನೋಡಿದ್ದೇ..... ಚೆನ್ನಾಗ್ ಇದೆ....
ಸೊ ನಿಮ್ಮ ಮದುವೆಯ ಕರೆಯೋಲೆ ಯಾವಾಗ ?
ಮದುವೆಯ ಕರೆಯೋಲೆ ತುಂಬಾ ಸೊಗಸಾಗಿದೆ...
ಬಾಯಲ್ಲಿ ನೀರೂರುವಂತಿದೆ...
ಗುರುಪ್ರಸಾದರ ಪ್ರಶ್ನೆಗೆ ದಯವಿಟ್ಟು ಉತ್ತರ ಕೊಡಬೇಕಾಗಿ ವಿನಂತಿ...
ಚಂದದ ಕರೆಯೋಲೆಗೆ ಅಭಿನಂದನೆಗಳು..
ನಾಗೇಶ್ ಅವರೇ,
ಭೇಟಿ ನೀಡಿದ್ದಕ್ಕೆ ಮತ್ತು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಹೀಗೆ ಭೇಟಿ ನೀಡುತ್ತಿರಿ.
ಗುರು ಅವರೇ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು! ಹೀಗೆ ಬರುತ್ತಾ ಇರಿ.....!
ನನ್ನ ಮದುವೆಯ ಕರೆಯೋಲೇನಾ?
ನನ್ನವರನ್ನು ಕೇಳಿ ತಿಳಿಸಲೇ, ಮತ್ತೆ ನಮ್ಮ ಮದುವೇ ಯಾವಾಗ ಅಂತಾ?! ಹ ಹ್ಹ ಹ್ಹ ಹ್ಹಾ !!!
ಪ್ರಕಾಶ್ ಅವರೇ,
ಸುಮ್ಮನೆ ಚೆನ್ನಾಗಿದೆ ಅಂತ ಹೇಳಿ ತಪ್ಪಿಸಿಕೊಳ್ಳುವುದಲ್ಲ, ಮದುವೆಗೆ ಬಂದು ಸಿಹಿಗಳಿಗೆ ಆಶಿರ್ವದಿಸಬೇಕು ತಿಳೀತಾ?
ಮತ್ತೆ ನಿಮ್ಮ ಹಾಗೂ ಗುರು ಅವರ ಪ್ರಶ್ನೆಗೆ ಉತ್ತರ ಸಿಕ್ಕಿತಲ್ಲಾ!?! ಹೀಗೆ ಬಂದು ನಮ್ಮೆಲ್ಲರನ್ನು ಹರಸಿರಿ....!
ಬಹಳ ಚೆನ್ನಾಗಿದೆ... ಈ ರಸಗುಲ್ಲ ಪ್ರೀಂಟರ್ಸ ಎಲ್ಲಿದ್ದಾರೆ ನನ್ನ ಮದುವೆ ಕರೆಯೋಲೆ ಕೂಡ ಅಲ್ಲೇ ಪ್ರಿಂಟ ಮಾಡಿಸುವಾ ಅಂತ. ಜಲೇಬಿ ಜಾಮೂನಿಗೆ ಎರಡು ಸ್ವೀಟ್ ಸ್ವೀಟಾದ ಮಕ್ಕಳು ಹುಟ್ಟಲಿ ಅಂತ ನಮ್ಮ ಹಾರೈಕೆ.
ಪ್ರಭು ಅವರೇ,
ನಿಮಗೆ ಮದುವೆ ಖಾಯಂ ಆಗುವ ಸುದ್ದಿ ಆದಷ್ಟು ಬೇಗ ತಿಳಿಸಿ! ಆಗ ನಾನೇ ನಿಮಗೆ ಆ ಪ್ರಿಂಟರ್ಸ್ ನ ಅಡ್ರೆಸ್ ಮತ್ತು ಫೋನ್ ನಂಬರ್ ಕೊಡುತ್ತೇನೆ, ಸರಿನಾ.... ?
ಮತ್ತು ನಿಮ್ಮ ಹಾರೈಕೆ ನಿಜವಾಗಿ ಆ ಮಕ್ಕಳು ನಿಮ್ಮ ಮದುವೆಯಲ್ಲಿ ಸಿಗಲಿ ಎಂದು ಆಶಿಸುತ್ತೇನೆ!
ಕರೆಯುತ್ತೀರಲ್ಲ ನಿಮ್ಮ ಮದುವೆಗೆ.......?! :)
ರಸಗುಲ್ಲ ಪ್ರಿಂಟರ್ಸ್, ಜಹಾಂಗೀರ್ ಪುರ!
omme visit kodabeku :)
sakattaagide nimma maduve invitation..
ಅಹಾ!! ಎಂತಹ ಸಿಹೀ ಮದುವೆ ಕರೆಯೋಲೆ. ಆಫೀಸಿಗೆ ಚಕ್ಕರ್ ಹೊಡಿಬೇಕಾದ್ರು ಪರವಾಗಿಲ್ಲ. ಇದನ್ನ ಮಾತ್ರ ಮಿಸ್ ಮಾಡ್ಕೊಳೊಹಾಗೇ ಇಲ್ಲ. ಖಂಡಿತಾ ಬರ್ತೀನಿ.
ಇನ್ನೊಂದು ಸಜೆಶನ್. ತಾಂಬೂಲದ ಜೊತೆ ಒಂದು ಡಯಾಬಿಟಿಸ್ ಮಾತ್ರೆ ಹಾಕಿ ಕೊಡಿ.
SSK ಸರ್,
ನಿಮ್ಮ ಲಗ್ನಪತ್ರಿಕೆಯ ಕರೆಯೋಲೆಗೆ ನಾವಂತೂ ದಂಪತಿ ಸಮೇತರಾಗಿ ಬರುತ್ತೇವೆ. ನನಗೆ ಸಿಹಿತಿಂಡಿಗಳೆಂದರೇ ಇಷ್ಟ.
ನಿಮ್ಮ ಲಗ್ನ ಪತ್ರಿಕೆಯೂ ವಿಭಿನ್ನವೆನಿಸಿತು...
ಮತ್ತೆ ನಿಮ್ಮ ಲೇಖನವನ್ನು ನಾನು ಓದಬಾರದೆಂದುಕೊಂಡಿಲ್ಲ ಸರ್, ನನಗೆ ಎಲ್ಲರ ಲೇಖನಗಳು ಓದುತ್ತೇನೆ. ನನಗೆ ಅದರಿಂದ ತಿಳಿದುಕೊಳ್ಳುವಂತದ್ದು ಇದ್ದೇ ಇರುತ್ತೆ. ನಿಮ್ಮ ಬ್ಲಾಗನ್ನು ನಾನು ಲಿಂಕಿಸಿಕೊಂಡಿಲ್ಲದ ಕಾರಣ ನನಗೆ ಗೊತ್ತಾಗುತ್ತಿರಲಿಲ್ಲ. ಈಗ ಲಿಂಕಿಸಿಕೊಂಡಿದ್ದೇನೆ. ಮತ್ತೆ ನಿಮ್ಮ ಎಲ್ಲಾ ಲೇಖನಗಳನ್ನು ಓದುತ್ತೇನೆ. ಇದುವರೆಗೆ ನನ್ನ ನನ್ನ ಗಮನಕ್ಕೆ ಬರದಿರುವುದಕ್ಕೆ ಕ್ಷಮೆಯಿರಲಿ...
ಧನ್ಯವಾದಗಳು.
SSK ಸರ್,
ನಿಮ್ಮ email id ಯನ್ನು ನನಗೆ ಕಳಿಸಿ...
ಶಿವು.ಕೆ
ssk ಮೇಡಂ
ನಿಮ್ಮ ಸಿಹಿ ಸಿಹಿ ಆಮ೦ತ್ರಣವನ್ನು ಒಪ್ಪಿ ಕೊ೦ಡು ನಾನು ಬರುತ್ತೇನೆ .. ನನಗೆ ಸಿಹಿ ತಿನಿಸು ಎ೦ದರೆ ಇಷ್ಟ .. ನಿಮ್ಮ ಆಮ೦ತ್ರಣ ವನ್ನು ಬಿಡಲಾಗುವುದೇ ..??? ಇಷ್ಟು ವೈವಿಧ್ಯ ಸಿಹಿ ಇರಬೇಕಾದರೆ ??? :-) :-) :-)
ತು೦ಬಾ ಸಿಹಿ ಸಿಹಿ ಆಮ೦ತ್ರಣಕ್ಕೆ ತು೦ಬಾ ಸಿಹಿ ಸಿಹಿ ಧನ್ಯವಾದಗಳು ... :-) :-)
ಸಿಹಿ.ಸಿಹಿ.ಕಳುಹಿಸಿದವರಿ (SSK) ಗೆ,
ಬೆಲ್ಲ-ಜೇನು ತಲುಪಿಸುವ ಪಾಕದಂತಹ ಧನ್ಯವಾದಗಳು.
ಸಕ್ಕರೆಯನು ಅಕ್ಕರೆಯಲಿತಿಂದು ನಲಿವ ನಮ್ಮಂಥವರಿಗೆ ಜಲೇಬಿ, ಚಿರೋಟಿ, ಬಾದುಶಾ, ಲಾಡು, ಜಾಮೂನು, ಓಹೋಹೋ.ಹೋ..
ವಿವಾವಹ ಭೋಜನವಿದು ವಿಶಿಷ್ಠ ಭಕ್ಷ್ಯಗಳಿವು...ಅಹಹ್ಹ..ಅಹಹ್ಹ..ಅಹಹ್ಹ..ಹಹ್ಹಹಾ
ಹರೀಶ್ ಮಾಂಬಾಡಿ ಅವರೇ,
ನನ್ನ ಬ್ಲಾಗಿಗೆ ಸ್ವಾಗತ. ಮದುವೆ ಆಮಂತ್ರಣ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
ಹೀಗೆ ಬರುತ್ತಾ ಇರಿ....!!
ರಾಜೀವ ಅವರೇ,
ಖಂಡಿತವಾಗಿ ನೀವು ಆಫೀಸಿಗೆ ರಜಾ ಹಾಕಿ, ತಪ್ಪದೆ ಈ ಮದುವೆಗೆ ಬರಬೇಕು.
ಇಲ್ಲದಿದ್ದರೆ ನಿಮ್ಮ ಮದುವೆಗೆ ನಾವು ಬರುವುದಿಲ್ಲ ಅಷ್ಟೇ!
ನಿಮ್ಮ ಸಜೆಶನ್ ಗೆ ಮತ್ತು ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!
ಶಿವೂ ಅವರೇ,
ನನ್ನ ಬ್ಲಾಗಿಗೆ ಸ್ವಾಗತ! ನೀವು ದಂಪತಿ ಸಮೇತರಾಗಿ ಬಂದರೆ ಅದಕ್ಕಿಂತಾ ಸಂತೋಷ ಬೇರೆ ಇಲ್ಲ!!
ಲೇಖನ ಮೆಚ್ಚಿದ್ದಕ್ಕೆ ಮತ್ತು ನನ್ನ ಕೋರಿಕೆಯನ್ನು ಮನ್ನಿಸಿ ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!
ನನ್ನ ಮೇಲ್ ಐ ಡಿ ಯನ್ನು ನಿಮಗೆ ಮೇಲ್ ಮಾಡುತ್ತೇನೆ. ಆದರೆ ಸಧ್ಯಕ್ಕೆ ನನ್ನ ಕಂಪ್ಯೂಟರ್ ನಲ್ಲಿ ಆಡಿಯೋ ಕೆಲಸ ಮಾಡುತ್ತಿಲ್ಲ.
ಮತ್ತೊಂದು ವಿಷಯ, ನಾನು ಸಾರ್ ಅಲ್ಲ ಮೇಡಮ್ಮು :)
ರೂಪ ಅವರೇ,
ನನ್ನ ಬ್ಲಾಗಿಗೆ ಸ್ವಾಗತ! ಸಿಹಿಯೊಳಗೆ ಸಿಹಿಯನ್ನು ಬೆರೆಸಿ, ನಿಮ್ಮ ಸಿಹಿಯಾದ ಅಭಿಪ್ರಾಯವನ್ನು ತಿಳಿಸಿದ್ದೀರ. ಥ್ಯಾಂಕ್ಸ್
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು, ಹೀಗೆ ಭೇಟಿ ನೀಡುತ್ತಿರಿ.
ಜಲನಯನ ಅವರೇ,
ಸಿಹಿಗಳ ಮದುವೆಗೆ ಬಂದು, ಸಿಹಿ ತಿಂದು, ಮಾಯಾ ಬಜಾರ್ ಹಾಡು ಹೇಳಿ ನಮ್ಮನ್ನು ನಗಿಸಿದ್ದೀರ!
ಪ್ರಾಸಬದ್ದವಾದ ನಿಮ್ಮ ಮಾತುಗಳು ಅದ್ಬುತ!! ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!!! ಹೀಗೆ ಭೇಟಿ ನೀಡುತ್ತಿರಿ.
ಊಟ ಮಾಡಿ ಕೈ ತೊಳೆದ ಮೇಲೆ ಆಶಿರ್ವಾದ ಮಾಡಕ್ಕೆ ವಧೂವರರು ಎಲ್ಲಿರ್ತಾರ್ರೀ?
ಉಷಾ ಅವರೇ,
ನನ್ನ ಬ್ಲಾಗಿಗೆ ಸ್ವಾಗತ!
ವಧೂ ವರರ ಬಗ್ಗೆ ಚಿಂತಿಸದೆ, ನೀವು ಮದುವೆ ಮನೆಯಲ್ಲಿ ಜಸ್ಟ್ ಎಂಜಾಯ್ ಮಾಡಿ ಅಷ್ಟೇ!!!! ಹ್ಹ ಹ್ಹ ಹ್ಹಾ ಹ್ಹಾ....!
ಚೆನ್ನಾಗಿದೆ ನಿಮ್ ಕರೆಯೋಲೆ. ನಾವು ಸಣ್ಣವರಿರುವಾಗ ಇಂಥ ಕರೆಯೋಲೆ ಮಾಡುತ್ತಿದ್ದುದು ನೆನಪಾಯಿತು.
-ಧರಿತ್ರಿ
Hi its very good one, I am planing to put it to my marriage card! really
Nice
Post a Comment