Monday, June 14, 2010

ಕನಸು.. ನನಸು... ಮನಸು....!!


ಹುಟ್ಟಿದ್ದು ಯಾಕೇಂತ ಗೊತ್ತಿಲ್ಲಾ ?
ಜೀವನದ ಗುರಿಯೂ ತಲುಪಿಲ್ಲ .....

ಭವಿಷ್ಯಕ್ಕಾಗಿ ಕನಸೊಂದಷ್ಟು ಇಹುದಲ್ಲ !
ನನಸಾಗುವುದೆಂತೋ ಅದು ಮಾತ್ರ ತಿಳಿದಿಲ್ಲಾ .

ಧ್ಯೇಯವ ಸಾಧಿಸುವ ಛಲವ ಬಿಡಲಿಲ್ಲ .....
ಆದರೇಕೋ ಅದೃಷ್ಟವೆಂಬುದು ಒಲಿಯುತಲಿಲ್ಲ,

ಮನದಾಸೆ ಯಾವುದೂ ಕೈಗೂಡಲಿಲ್ಲ ;
ಬದುಕುವ ಆಸೆಯು ಕರಗುತಿಹುದಲ್ಲ ~~~~~

ಇಷ್ಟಾದರೂ ಸ್ವಪ್ನವ ಕಾಣುವುದ ಬಿಡಲಿಲ್ಲ !!
ಅಲ್ಲಾದರೂ ಸರಿ ಹರಸಲಿ ದೇವರುಗಳೆಲ್ಲ .....!!!!!

ಮನದ ಬಯಕೆಗಳು ಈಡೇರುತಿದೆಯಲ್ಲ ,
ಎನ್ನುತ್ತಾ ಕಣ್ಬಿಟ್ಟು ನೋಡಿದಾಗ ಶೂನ್ಯವೇ ಸುತ್ತೆಲ್ಲ ;

ಅದನೇ ನಿಜವೆಂದು ನಂಬಬಹುದಲ್ಲ ?!
ಎಚ್ಚೆತ್ತ ಮೇಲೆ ಸತ್ಯ ತಿಳಿಯುವುದಲ್ಲ ..!!

ನಿದ್ದೇಲೇ ಕಳೆದಾರೆ ಜೀವನವೆಲ್ಲಾ .....,
ಬದುಕು ಹೋರಾಟದ ಜಂಜಾಟವಿಲ್ಲ .

ಆದರೆ ಇದ್ಯಾವುದೂ ನಡೆಯುವುದಿಲ್ಲ ,
ಯಾಕೆಂದರೆ ಯಾವುದೂ ಶಾಶ್ವತವಲ್ಲ !!!

27 comments:

ಶಿವಪ್ರಕಾಶ್ said...

Never Ever Stop Dreaming.. :)
It is the first step for any achievement... :)
Nice one madam :)

SSK said...

Tumbaa olleya avalokana nimmadu, lekhana chennaagide.

Dr.D.T.Krishna Murthy. said...

ssk;ಯವರೇ ,ನಿಮ್ಮ ಕವನ ಓದುತ್ತಿದ್ದಂತೆ ಕಗ್ಗದ ಈ ಸಾಲುಗಳು ನೆನಪಿಗೆ ಬಂದವು.ನಿಮಗಿವು ಸ್ವಲ್ಪ ಮಟ್ಟಿಗೆ ಸಾಂತ್ವನ ಕೊಡಬಹುದು ಎಂದು ಕೊಂಡಿದ್ದೇನೆ.
ಬಾಳ್ಕೆಯಲಿ ನೂರೆಂಟು ತೊಡಕು ತಿಣುಕುಗಳುಂಟು |
ಕೇಳ್ಕೆ ಮಾಣ್ಕೆಗಳಿಗವು ಬಗ್ಗವು ಒಂದಿನಿತುಂ |
ಗೋಳ್ಕರೆದರೇನು ಫಲ,ಗುದ್ದಾಡಲೇನು ಫಲ|
ಪಲ್ಕಿರಿದು ತಾಳಿಕೊಳೋ-----ಮಂಕು ತಿಮ್ಮ|
ನಿಮ್ಮ ಕನಸುಗಳೆಲ್ಲಾ ನನಸಾಗಲಿ ಎನ್ನುವ ಹಾರೈಕೆ.

ಮನಸು said...

tumba chennagide kanasina manasu sada nammondige idde irute...

ಮನದಾಳದಿಂದ............ said...

ಭಾವಪೂರ್ಣ ಕವನ........
ಸಲೆ ಗೆಲುವಿನ ಮೆಟ್ಟಿಲು........ ಅದಕ್ಯಾಕೆ ಚಿಂತೆ....
be happy.........

ಜಲನಯನ said...

ಎಸ್ಎಸ್....ಛೇ...ನೀವಂತೂ ಹೇಳೋಲ್ಲಾ ನಿಮ್ಮ ಹೆಸರು....ಬೇಡ ಬಿಡಿ....
ಅಲ್ಲಾರೀ ಯಾಕೆ ಇದ್ದಕ್ಕಿದ್ದಂತೆ....? ಎಲ್ಲಾ ಇದೆ...ಆದ್ರೆ ಏನೂ ಇಲ್ಲ ಅಂತ ಭಾವನೆ...?? ಅದು ಭಾವಮಂಥನಕ್ಕೆ ಸೀಮಿತವಾದರೆ ಸಾಕು....ಹೂಂರೀ...
ಹೌದು..ನೀವು ಬರೆದಿರೋದು....ಚಕ್ಕುಲಿ ಬಗ್ಗೆನಾ..? ಅಥವಾ ಜಲೇಬಿ ಬಗ್ಗೆನಾ....ಸುತ್ತು--ಸುತ್ತು..ಮಧ್ಯೆ..ನಥಿಂಗು....ಹಹಹಹ.....

SSK said...

ಶಿವಪ್ರಕಾಶ್ ಕವನ ಓದಿ, ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಕನಸು, ಮನಸುಗಳ ಮಾತು ಮಧುರ ಅಲ್ಲವೇ.

SSK said...

ಈ ಪ್ರತಿಕ್ರಿಯೆ ಕಳಿಸಿದವರು ಯಾರೆಂದು ಗೊತ್ತಾಗಲಿಲ್ಲ.
ನೀವು ಬರೆದಿರುವುದನ್ನು ಹಾಗೆ ಹಾಕಿರುವೆ.
ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು!

SSK said...

ಡಾಕ್ಟರ ಕೃಷ್ಣಮೂರ್ತಿ ಅವರೇ,
ಎಲ್ಲರ ಜೀವನದಲ್ಲೂ ನಾನಾ ತಿರುವುಗಳು, ಬೀಳು ಏಳುಗಳು ಮತ್ತು ಎಡರು ತೊಡರುಗಳು ಸಹಜ!
ನಿಮ್ಮ ಸಾಂತ್ವನದ ನುಡಿಗಳಿಗೆ ಮತ್ತು ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.

SSK said...

ಮನಸು, ಹೌದು ನಿಮ್ಮ ಮಾತು ನಿಜ,
ಕನಸು ,ನನಸು ಮತ್ತು ಮನಸು ನಮ್ಮ ಜೀವನದಲ್ಲಿ ಅವಿಭಾಜ್ಯ!
ಕವನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

SSK said...

ಪ್ರವೀಣ್ ನಿಮ್ಮ ಮಾತು ಸತ್ಯ ಆದರೆ ಚಿಂತೆಯಂತೂ ಇದ್ದೆ ಇರುತ್ತದಲ್ಲ.
ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ನಿಮಗೆ.

SSK said...

ಡಾಕ್ಟ್ರೆ, ನಿಮ್ಮ ಪ್ರಶ್ನೆಗೆ ಉತ್ತರ ನಿಮ್ಮ ಬ್ಲಾಗಿನಲ್ಲಿ ಬರೆದಿರುವೆ.
ನನ್ನ ಒಗಟಿಗೆ ಉತ್ತರ ನೀಡಿ ಪ್ಲೀಸ್!

ಸುತ್ತೊಳಗೆ ಸುತ್ತಿ ಬಂದು ಸುಸ್ತಾಗಿ ಬಂದದ್ದು ಈ ಸುತ್ತು. ಹ ಹ್ಹ ಹ್ಹ ಹ್ಹಾ ಹ್ಹಾ......!
ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ, ಬೇಗ ತಿಳಿಸಿ. :)

Guruprasad said...

ಸಿಂಪ್ಲಿ ಸೂಪರ್,,,, ತುಂಬಾ ಅರ್ಥ ದಿಂದ ಕೂಡಿದೆ ಕವನ,,, ವೆರಿ ನೈಸ್ ಒನ್...!!!!
ಗುರು

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ
ಅರ್ಥಗರ್ಭಿತ ಸಾಲುಗಳು

SSK said...

ಗುರು ಅವರೇ,
ಕವನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಥ್ಯಾಂಕ್ಸ್, ಹೀಗೆ ಬರುತ್ತಾ ಇರಿ.

SSK said...

ಗುರುಮೂರ್ತಿ ಅವರೇ,
ಏನೋ ಹೀಗೆ ಭಾವನೆ ಮತ್ತು ಅನುಭವಗಳನ್ನು ಸೇರಿಸಿ ಪ್ರಯತ್ನಿಸಿದ ಕವನ ಇದು !
ಮೆಚ್ಚಿಕೊಂಡು ಪ್ರೋಸಾಹಿಸಿದ್ದಕ್ಕೆ ಧನ್ಯವಾದಗಳು.

Alpyner said...

SSK - "ನಿದ್ದೇಲೆ ಕಳೆದಾರೆ..." ಸಾಲುಗಳು ಇಷ್ಟವಾದವು.ನಿಮ್ಮ ಕವನದ "ಯಾಕೆಂದರೆ ಯಾವುದೂ ಶಾಶ್ವತವಲ್ಲ..." ಸಾಲಿಗೆ ನನ್ನ interpretation - ಕಷ್ಟ, ದುರದೃಷ್ಟ , ದುಃಖ, ನೋವು, ಹಿಂಸೆ, ಅಸಹಾಯಕತೆ, ಹತಾಶೆ, ಸೋಲು ಯಾವುದೂ ಶಾಶ್ವತವಲ್ಲ- ಸ್ವಪ್ನದಂತೆ.

shivu.k said...

ಸರ್,

ಅರ್ಥಗರ್ಭಿತವಾದ ಸಾಲುಗಳು ಚಿಂತನೆಗೆ ಬೀಳುವಂತೆ ಮಾಡುತ್ತವೆ...ಉತ್ತಮ ಕವನಕ್ಕೆ ಥ್ಯಾಂಕ್ಸ್..

SSK said...

ಗಿರೀಶ್ ಅವರೇ, ನಿಮಗೆ ಸ್ವಾಗತ!
ನಿಮ್ಮ ಅಭಿಪ್ರಾಯಕ್ಕೆ ತುಂಬು ಹೃದಯದ ಧನ್ಯವಾದಗಳು!
"ಯಾಕೆಂದರೆ ಯಾವುದೂ ಶಾಶ್ವತವಲ್ಲ" ಎಂಬುದನ್ನು ನೀವು ತಿಳಿಸಿರುವ ಪದಗಳನ್ನು
ಮನಸಿನಲ್ಲಿಟ್ಟುಕೊಂಡು ಹಾಗೆ ಒಂದೇ ಸಾಲಿನಲ್ಲಿ ಬರೆದದ್ದು.
ಒಳ್ಳೆಯದಾಗಲಿ, ಕೆಟ್ಟ ದಿನಗಳಾಗಲಿ ಯಾವುದೂ ಶಾಶ್ವತವಲ್ಲ, ಬರುತ್ತವೆ , ಹೋಗುತ್ತವೆ ಎಂಬರ್ಥದಲ್ಲಿ!!
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳಿಗೆ ಮತ್ತೊಮ್ಮೆ ಧನ್ಯವಾದಗಳು. ಹೀಗೆ ಭೇಟಿ ನೀಡುತ್ತಿರಿ.

SSK said...

ಶಿವೂ ಅವರೇ,
ಕವನ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಮತ್ತು ಪ್ರೋತ್ಸಾಹಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ನಿಮಗೆ! ಹೀಗೆ ಭೇಟಿ ನೀಡುತ್ತಿರಿ.

Girish Jamadagni said...

ಕ್ಷಮಿಸಿ. ಹಿಂದಿನ ಕಾಮೆಂಟಿನಲ್ಲಿ ನನ್ನ ಪೂರ್ಣ ಹೆಸರನ್ನು ಹಾಕಲು ಮರೆತಿದ್ದೆ...ನನ್ನ ಬ್ಲಾಗ್‌ಗೆ ಬಂದು ಲೇಖನ ಓದಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ಬಿಡುವಾದಾಗ ನಿಮ್ಮ ಕಾಮೆಂಟಿಗೆ ನನ್ನ ಉತ್ತರ ಓದಿ....ಗಿರೀಶ್ ಜಮದಗ್ನಿ (ಕಪ್ಪು-ಬಿಳುಪು)

Raghu said...

ಚೆನ್ನಾಗಿದೆ ಕವನ.Keep writing.
ನಿಮ್ಮವ,
ರಾಘು.

Dileep Hegde said...

ಆದರೆ ಇದ್ಯಾವುದೂ ನಡೆಯುವುದಿಲ್ಲ ,
ಯಾಕೆಂದರೆ ಯಾವುದೂ ಶಾಶ್ವತವಲ್ಲ !!!

nija.. yavudoo shashvatavalla..
chennagide..

SSK said...

ರಘು ಅವರೇ,
ನಿಮಗೆ ಸ್ವಾಗತ, ಕವನ ಓದಿ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು!
ಕ್ಷಮಿಸಿ, ನಿಮಗೆ ತಡವಾಗಿ ಉತ್ತರಿಸುತ್ತಿರುವುದಕ್ಕೆ ,
ಹೀಗೆ ಭೇಟಿ ನೀಡುತ್ತಿರಿ. ಮತ್ತೊಮ್ಮೆ ಧನ್ಯವಾದಗಳು.

SSK said...

ದಿಲೀಪ್ ಹೆಗ್ಡೆ ಅವರೇ,
ತಡವಾಗಿ ಉತ್ತರಿಸುತ್ತಿರುವುದಕ್ಕೆ ಮೊದಲು ಕ್ಷಮೆ ಯಾಚಿಸುತ್ತೇನೆ.

ಕವನ ಓದಿ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಥ್ಯಾಂಕ್ಸ್.
ಹೀಗೆ ಬರುತ್ತಿರಿ!

ಮನಮುಕ್ತಾ said...

ಅರ್ಥಪೂರ್ಣ ಕವನ..

SSK said...

ಮನಮುಕ್ತಾ ಅವರಿಗೆ ಸ್ವಾಗತ,
ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!
ನಿಮ್ಮ ಪ್ರೋತ್ಸಾಹ ಸದಾ ಇರಲಿ. ಹೀಗೆ ಭೇಟಿ ನೀಡುತ್ತಿರಿ.